The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
society depend more on women ಪ್ರಧಾನ ಖಿನ್ನತೆಯ ಅಸ್ವಸ್ಥತೆ (ಮರುಕಳಿಸುವ ಖಿನ್ನತೆಯ ಅಸ್ವಸ್ಥತೆ , ವೈದ್ಯಕೀಯ ಮಧ್ಯಸ್ಥಿಕೆಯ ಖಿನ್ನತೆ , ಪ್ರಧಾನ ಖಿನ್ನತೆ , ಏಕಧ್ರುವೀಯ ಖಿನ್ನತೆ , ಅಥವಾ ಏಕಧ್ರುವೀಯ ಅಸ್ವಸ್ಥತೆ ಎಂದು ಕೂಡ ಕರೆಯಲಾಗುತ್ತದೆ) ಎಂಬುದು ಮಾನಸಿಕ ಅಸ್ವಸ್ಥತೆಯಾಗಿದ್ದು, ಇದು ಕಡಿಮೆಆತ್ಮಾಭಿಮಾನದ ಜತೆ ಮಂದ ಚಿತ್ತಸ್ಥಿತಿ ಹಾಗು ಸಹಜವಾಗಿ ಸಂತೋಷಪಡುವಂತಹ ಚಟುವಟಿಕೆಗಳಲ್ಲಿ ಆಸಕ್ತಿ ಅಥವಾ ಸಂತೋಷ ಕಳೆದುಕೊಳ್ಳುವಲಕ್ಷಣಗಳಿಂದ ಕೂಡಿದೆ. "ಖಿನ್ನತೆಯ ಪ್ರಧಾನ ಅಸ್ವಸ್ಥತೆ"(ಮೇಜರ್ ಡಿಪ್ರೆಸಿವ್ ಡಿಸಾರ್ಡರ್) ಎಂಬ ಪದವನ್ನು ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ ಆಯ್ಕೆಮಾಡಿತು. ಇದನ್ನು ಡೈಗ್ನಾಸ್ಟಿಕ್ ಅಂಡ್ ಸ್ಟ್ಯಾಟಿಸ್ಟಿಕಲ್ ಮ್ಯಾನ್ಯೂವಲ್ ಆಫ್ ಮೆಂಟಲ್ ಡಿಸ್ ಆರ್ಡರ್ (DSM-III) ನ 1980 ರ ಆವೃತ್ತಿಯಲ್ಲಿ ಚಿತ್ತಸ್ಥಿತಿ ಅಸ್ವಸ್ಥತೆಎಂದು ಈ ರೋಗಲಕ್ಷಣದ ಗುಂಪಿಗೆ ಹೆಸರಿಟ್ಟಿತು ಮತ್ತು ಅದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಅಮೆರಿಕ ಸಂಯುಕ್ತ ಸಂಸ್ಥಾನ ವು (ಸಾಮಾನ್ಯವಾಗಿ ಸಂಯುಕ್ತ ಸಂಸ್ಥಾನ , ಯುಎಸ್ , ಯುಎಸ್ಎ ಅಥವಾ ಅಮೆರಿಕಾ ಎಂದು ಕರೆಯಲ್ಪಡುವ) ಐವತ್ತು ರಾಜ್ಯಗಳು ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ. ಬಹುತೇಕ ಕೇಂದ್ರ ಭಾಗದ ಉತ್ತರ ಅಮೆರಿಕಾದಲ್ಲಿ ಸ್ಥಿತವಾಗಿರುವ ಈ ದೇಶದ ಒತ್ತೊತ್ತಾಗಿರುವ 48 ರಾಜ್ಯಗಳು ಹಾಗೂ ಪ್ರಧಾನ ಡಿಸ್ಟ್ರಿಕ್ಟ್ ವಾಷಿಂಗ್ಟನ್ ಡಿಸಿ, ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ಸಮುದ್ರಗಳ ನಡುವೆ ನೆಲೆಗೊಂಡಿದ್ದು, ಉತ್ತರದಲ್ಲಿ ಕೆನಡಾ ಹಾಗೂ ದಕ್ಷಿಣದಲ್ಲಿ ಮೆಕ್ಸಿಕೋಗಳನ್ನು ಗಡಿಗಳಾಗಿ ಹೊಂದಿದೆ. ಅಲಾಸ್ಕಾ ರಾಜ್ಯವು ವಾಯುವ್ಯ ಭಾಗದಲ್ಲಿದ್ದು, ಕೆನಡಾವನ್ನು ಉತ್ತರ ದಿಕ್ಕಿನಲ್ಲೂ ಬೇರಿಂಗ್ ಜಲಸಂಧಿಯನ್ನು ಹಾದು ರಷ್ಯಾವನ್ನು ಪಶ್ಚಿಮ ದಿಕ್ಕಿನಲ್ಲೂ ಹೊಂದಿದೆ.
ರಷ್ಯೆ ಅಥವಾ ರಷ್ಯಾ ಅಥವಾ ರಷ್ಯ ಅಥವಾ ರೂಸ್ (ಪ್ರಥಮ ವಿಭಕ್ತಿ: ರೂಸು) (ರೂಸಿ: Россия), ಅಧಿಕೃತವಾಗಿ ರೂಸಿ ಒಕ್ಕೂಟ (ರೂಸಿ: Российская Федерация) , ಉತ್ತರ ಯುರೇಷಿಯಾ (ಯುರೋಪ್ ಹಾಗೂ ಏಷ್ಯಾ ಒಟ್ಟಿಗೆ) ದಲ್ಲಿರುವ ಒಂದು ದೇಶ. ಇದೊಂದು 83 ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್್ಯತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್ಲ್ಯಾಂಡ್, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಪೋಲೆಂಡ್ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್ಸ್ತಾನ್, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ.
ಕ್ರಿಸ್ಟೋಫರ್ ರಾಬರ್ಟ್ ಇವಾನ್ಸ್ (ಜನನ ಜೂನ್ ೧೩, ೧೯೮೧) ಒಬ್ಬ ಅಮೇರಿಕನ್ ನಟ. ಮಾರ್ವೆಲ್ ಸಿನೆಮ್ಯಾಟಿಕ್ ಯೂನಿವರ್ಸ್ (MCU) ನಲ್ಲಿ ಕ್ಯಾಪ್ಟನ್ ಅಮೇರಿಕಾ ಪಾತ್ರಕ್ಕೆ ಹೆಸರುವಾಸಿಯಾದ ಇವಾನ್ಸ್ 2000 ರಲ್ಲಿ ಆಪೋಸಿಟ್ ಸೆಕ್ಸ್ನಂತಹ ದೂರದರ್ಶನ ಸರಣಿಗಳಲ್ಲಿನ ಪಾತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2001 ರ ನಾಟ್ ಅನದರ್ ಟೀನ್ ಮೂವಿ ಸೇರಿದಂತೆ ಹಲವಾರು ಹದಿಹರೆಯದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ, ಅವರು ೨೦೦೫ ರ ಫೆಂಟಾಸ್ಟಿಕ್ ಫೋರ್ ನಲ್ಲಿ ಮಾರ್ವೆಲ್ ಕಾಮಿಕ್ಸ್ ಪಾತ್ರದ ಹ್ಯೂಮನ್ ಟಾರ್ಚ್ ಮತ್ತು ಅದರ ಉತ್ತರಭಾಗವಾದ ಫೆಂಟಾಸ್ಟಿಕ್ ಫೋರ್: ರೈಸ್ ಆಫ್ ದಿ ಸಿಲ್ವರ್ ಸರ್ಫರ್ (೨೦೦೭) ಪಾತ್ರಕ್ಕಾಗಿ ಗಮನ ಸೆಳೆದರು.
ಸಮಾಜಶಾಸ್ತ್ರವು ಸಮಾಜ ವಿಜ್ಞಾನಗಳಲ್ಲಿ ಹೊಸದಾದ ಮತ್ತು ಬಹುಶೀಘ್ರವಾಗಿ ಬೆಳೆಯುತ್ತಿರುವ ಜ್ಞಾನ ಶಾಖೆಗಳಲ್ಲೊಂದು (ಸೋಷಿಯಾಲಜಿ). ಈ ಪರಿಕಲ್ಪನೆಯನ್ನು ಪ್ರಥಮಬಾರಿಗೆ ಫ್ರಾನ್ಸ್ನ ಸಾಮಾಜಿಕ ತತ್ತ್ವಜ್ಞಾನಿ ಆಗಸ್ಟ್ ಕಾಂಟ್ ಪ್ರಯೋಗಿಸಿದ (1829). ಮಾನವ ಮತ್ತು ಸಮಾಜದ ನಡುವಿನ ಪರಸ್ಪರ ಸಂಬಂಧ ಮತ್ತು ಪ್ರಭಾವ ಸ್ವರೂಪವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಈ ವಿಷಯ ವ್ಯಾಪ್ತಿಯಲ್ಲಿ ಸಮಾಜದ ಎಲ್ಲ ಸಂಸ್ಥೆಗಳೂ ಆ ಸಂಸ್ಥೆಗಳಲ್ಲಿ ನಡೆಯುವ ಚಟವಟಿಕೆಗಳೂ ಕಾಲದಿಂದ ಕಾಲಕ್ಕೆ ಸಮಾಜದಲ್ಲಿ ತಲೆದೋರುವ ಬದಲಾವಣೆಗಳೂ ಪ್ರಮುಖ ಸ್ಥಾನ ಪಡೆದಿವೆ.
ಬೋಸ್ಟನ್ (/ˈbɒstən/ ಎಂದು ಕರೆಯಲಾಗುವ) ಮ್ಯಾಸಚೂಸೆಟ್ಸ್ನ ರಾಜಧಾನಿ ಮತ್ತು ಅತಿ ದೊಡ್ಡ ಪಟ್ಟಣವಾಗಿದೆ, ಇದುಅಮೆರಿಕಾ ಸಂಯುಕ್ತ ಸಂಸ್ಥಾನದ ಅತ್ಯಂತ ಹಳೆಯ ನಗರವಾಗಿದೆ. ಇದು ನ್ಯೂ ಇಂಗ್ಲೆಂಡ್ನ ಅತ್ಯಂತ ದೊಡ್ಡ ನಗರವಾಗಿದ್ದು, ಇಡೀ ನ್ಯೂ ಇಂಗ್ಲೆಂಡ್ನ ಮೇಲೆ ತನ್ನ ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಭಾವವನ್ನು ಬೀರಿರುವುದರಿಂದ ಇದನ್ನು ಅನಧಿಕೃತವಾಗಿ "ನ್ಯೂ ಇಂಗ್ಲೆಂಡ್ನ ರಾಜಧಾನಿ" ಎನ್ನುವರು. 2009ರ ಅಂದಾಜಿನ ಪ್ರಕಾರ ಬೋಸ್ಟನ್ ನಗರ ಪ್ರದೇಶದ ಜನಸಂಖ್ಯೆಯು 645,169 ರಷ್ಟಿದ್ದು, ದೇಶದ ಹನ್ನೆರಡನೇ ಅತಿದೊಡ್ಡ ನಗರವನ್ನಾಗಿ ಮಾಡಿದೆ.
ಹಿಂದು ಧರ್ಮ ಎಂದರೆ ಅದು ಮಾನವ ಧರ್ಮ, ಅನಂತ ಸತ್ಯ ಧರ್ಮ, ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.
ವಿಜ್ಞಾನದ ಇತಿಹಾಸ ಎಂದರೆ ನೈಸರ್ಗಿಕ ವಿಶ್ವವನ್ನು ಮನುಷ್ಯರು ಅರ್ಥಮಾಡಿಕೊಳ್ಳುವಿಕೆಯ ಐತಿಹಾಸಿಕ ಬೆಳವಣಿಗೆಯ ಅಧ್ಯಯನ ಎನ್ನಬಹುದು. 20ನೇ ಶತಮಾನದ ಕೊನೆಯವರೆಗೆ ವಿಜ್ಞಾನದ ಇತಿಹಾಸ, ವಿಶೇಷವಾಗಿ ಭೌತಿಕ ಮತ್ತು ಜೀವಶಾಸ್ತ್ರೀಯ ವಿಜ್ಞಾನಗಳು ತಪ್ಪು ಸಿದ್ಧಾಂತಗಳ ಮೇಲೆ ನೈಜ ಸಿದ್ಧಾಂತಗಳ ವಿಜಯವನ್ನು ಸಾರುವ ನಿರೂಪಣೆಗಳ ಹಾಗೆ ಕಾಣಲಾಗುತ್ತಿತ್ತು. ವಿಜ್ಞಾನವು ನಾಗರಿಕತೆಯ ಪ್ರಗತಿಯ ಒಂದು ಬಹುಮುಖ್ಯ ಆಯಾಮವೆಂದೇ ಚಿತ್ರಿತವಾಗಿದೆ.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದುಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sowthe seeds to get ripen fruits.) ಹಾವೂ ಸಾಯ್ಬಾರದು, ಕೋಲೂಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English:from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ಎರಿಕ್ ಆರ್ಥರ್ ಬ್ಲೇರ್ (ಜನನ: ೨೫ ಜೂನ್ ೧೯೦೩; ನಿಧನ: ೨೧ ಜನವರಿ ೧೯೫೦), (ಜಾರ್ಜ್ ಆರ್ವೆಲ್ ಎಂಬ ಸಾಹಿತ್ಯದ ಕಾವ್ಯನಾಮದೊಂದಿಗೆ ಚಿರಪರಿಚಿತ) ಒಬ್ಬ ಇಂಗ್ಲಿಷ್ ಬರಹಗಾರ ಹಾಗೂ ಪತ್ರಕರ್ತರಾಗಿದ್ದರು. ಇವರ ಕೃತಿಗಳಲ್ಲಿ ಚಾತುರ್ಯ ಮತ್ತು ಜಾಣತನ, ಸಾಮಾಜಿಕ ಅನ್ಯಾಯದ ಗಹನ ತಿಳಿವಳಿಕೆ, ಸರ್ವಾಧಿಕಾರ ಪ್ರಭುತ್ವದ ವಿರುದ್ಧ ಗಾಢ, ಕ್ರಾಂತಿಕಾರಿ ವಿರೋಧ, ಭಾಷೆಯಲ್ಲಿ ಸ್ಫಟಿಕದಷ್ಟು ಸ್ಪಷ್ಟನೆಗಾಗಿ ಹಂಬಲ, ಹಾಗೂ, ಪ್ರಜಾಪ್ರಭುತ್ವದ ಸಮಾಜವಾದದಲ್ಲಿ ದೃಢ ನಂಬಿಕೆ - ಇವೆಲ್ಲವೂ ಎದ್ದುಕಾಣುತ್ತವೆ.ಇಪ್ಪತ್ತನೆಯ ಶತಮಾನದಲ್ಲಿ ಬಹುಶಃ ಇಂಗ್ಲಿಷ್ ಸಂಸ್ಕೃತಿಯ ಅತ್ಯುತ್ತಮ ಚರಿತ್ರೆ ಲೇಖಕರೆನಿಸಿದ ಜಾರ್ಜ್ ಆರ್ವೆಲ್, ಕಾಲ್ಪನಿಕ ಕಥೆ, ವಿಮರ್ಶಾತ್ಮಕ ಪತ್ರಿಕೋದ್ಯಕ್ಕಾಗಿ, ಸಾಹಿತ್ಯ ಸಂವಾದ-ವಿಮರ್ಶೆ ಮತ್ತು ಕವಿತೆ ಬರೆದರು. ನರಕಸದೃಶ ಕಾದಂಬರಿ ಎನ್ನಲಾದ ನೈನ್ಟೀನ್ ಎಯ್ಟಿ-ಫೋರ್ (ಪ್ರಕಾಶನ: ೧೯೪೯) ಹಾಗೂ ಹಾಸ್ಯ-ವಿಡಂಬನಾತ್ಮಕ ಕಿರು-ಕಾದಂಬರಿ ಅನಿಮಲ್ ಫಾರ್ಮ್ (೧೯೪೫) ಕೃತಿಗಳಿಗಾಗಿ ಜಾರ್ಜ್ ಆರ್ವೆಲ್ ಅತಿಹೆಚ್ಚು ಪರಿಚಿತರು.
ಇಮ್ಮಡಿ ಪುಲಿಕೇಶಿ, ಚಾಲುಕ್ಯ ವಂಶದ ಪ್ರಸಿದ್ಧ ದೊರೆ.(ಕ್ರಿ.ಶ ೬೧೦-೬೪೨) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು."ಇವರು ಮೂಲತಃ ಬನವಾಸಿಯಿಂದ ಬಂದ ಕನ್ನಡದ ಜನಾಂಗದವರು.ಮುಂದೆ ಜೈನ ಸಂಪ್ರದಾಯ ಪಾಲಿಸಿದರು. ಕ್ರಿ.ಶ.ಸು.
ಉತ್ತರದ ಹಿಮಾಲಯದಿಂದ ದಕ್ಷಿಣದ ಹಿಂದೂ ಮಹಾ ಸಾಗರದ ವರೆಗೂ ಮತ್ತು ಪಶ್ಚಿಮದ ಗುಜರಾತಿನಿಂದ ಪೂರ್ವದ ಅರುಣಾಚಲದ ವರೆಗೂ ಹರಿಯುವ ನದಿಗಳ ಪಟ್ಟಿಯನ್ನು ನೀಡಲಾಗಿದೆ. ಭಾರತದ ಮುಖ್ಯ ಹಾಗೂ ದೊಡ್ಡ ನದಿಗಳೆಂದರೆ: ಬಂಗಾಳ ಕೊಲ್ಲಿಯನ್ನು ಸೇರುವ ನದಿಗಳು : ಬ್ರಹ್ಮಪುತ್ರ, ಕಾವೇರಿ, ಗಂಗಾ, ಮಹಾನದಿ, ಗೋದಾವರಿ, ಕೃಷ್ಣಾ, ಮೇಘನ. ಅರಬ್ಬಿ ಸಮುದ್ರವನ್ನು ಸೇರುವ ನದಿಗಳು : ನರ್ಮದಾ, ತಪತಿ, ಸಾಬರಮತಿ, ಶರಾವತಿ.
ಐರ್ಲೆಂಡ್ (pronounced /ˈaɪrlənd/ ( listen), ಟೆಂಪ್ಲೇಟು:IPA2; ಐರಿಷ್:Éire, pronounced [ˈeːɾʲə] ( ); ಅಲ್ ಸ್ಟರ್ ಸ್ಕಾಟ್ಸ್ ಏರ್ಲಾನ್ ಯುರೋಪನಲ್ಲಿರುವ ಮೂರನೆಯ ಅತಿ ದೊಡ್ಡ ದ್ವೀಪವೆನಿಸಿದೆ.ವಿಶ್ವದಲ್ಲೇ ಇಪ್ಪತ್ತನೆಯ ವಿಶಾಲ ದ್ವೀಪವಾಗಿದೆ. ಇದು ಯುರೋಪ್ ಖಂಡದ ವಾಯುವ್ಯ ಭಾಗದಲ್ಲಿ ವಿಸ್ತರಿಸಿ ತನ್ನ ಸುತ್ತಲೂ ನೂರಾರು ಸಣ್ಣ ಮತ್ತು ಪುಟ್ಟ ದ್ವೀಪಗಳನ್ನು ಒಳಗೊಂಡಿದೆ. ಐರ್ಲೆಂಡಿನ ಪೂರ್ವಭಾಗದಲ್ಲಿ ಐರಿಶ್ ಸಮುದ್ರದಿಂದ ಪ್ರತ್ಯೇಕಗೊಂಡ ಗ್ರೇಟ್ ಬ್ರಿಟನ್ ದ್ವೀಪವಿದೆ.
ಕರ್ನಾಟಕ ರಾಜ್ಯದಲ್ಲಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯನ್ನು ಭಾರತದ ಬ್ಯಾಂಕಿಂಗ್ನ ತೊಟ್ಟಿಲು ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಏಳು ಬ್ಯಾಂಕುಗಳು ಈ ಪ್ರದೇಶದಲ್ಲಿ ಹುಟ್ಟಿಕೊಂಡಿತು, ಅವುಗಳೆಂದರೆ: ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ವೈಶ್ಯ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು . ಮೇಲಿನ ಬ್ಯಾಂಕ್ಗಳ ಪಟ್ಟಿಯಲ್ಲಿ ಮೊದಲ ಐದು ಬ್ಯಾಂಕ್ಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸ್ಥಾಪಿಸಲಾಯಿತು.
ಕರ್ನಾಟಕವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ೧೯೭೩ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು.ಇದಕ್ಕೆ ಕಾರಣ ಕರ್ನಾಟಕ ಏಕೀಕರಣದ ಮೊದಲ ಸೃಷ್ಟಿ ಮೈಸೂರು ಮಹಾಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ).
ಕೊರೊನಾ ವೈರಸ್ ಕಾಯಿಲೆ 2019 ( ಕೋವಿಡ್ ೧೯ ) ಎಂಬುದು ತೀವ್ರವಾದ ಉಸಿರಾಟದ ಸಮಸ್ಯೆಯಾದ ಸಿಂಡ್ರೋಮ್ ಕೊರೊನಾವೈರಸ್ ೨ (ಸಾರ್ಸ್-ಕೋವಿಡ್-೧೯) ನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ . ಈ ರೋಗ ಮೊದಲು ೨೦೧೯ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿತು. ಈ ಕಾಯಿಲೆಯ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಕೆಮ್ಮು,ವಾಸನೇ ಮತ್ತು ರುಚಿ ನಷ್ಟ ಉಸಿರಾಟದ ತೊಂದರೆ.
ಹೊನೊಲುಲು (English pronunciation: /hɒnɵˈluːluː/) ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಜ್ಯವಾದ ಹವಾಯಿಯ ರಾಜಧಾನಿ. ಈ ನಗರವು ಅತಿ-ಜನನಿಬಿಡ ಜನಗಣತಿ-ಗೊತ್ತುಪಡಿಸಿದ ಸ್ಥಳ (ಸಿಡಿಪಿ) ಆಗಿದೆ. ಹೊನೊಲುಲು ಎಂಬುದು ಒವಾಹು ದ್ವೀಪದ ಆಗ್ನೇಯ ಸಾಗರತೀರದಲ್ಲಿರುವ ನಗರವಲಯವನ್ನು ಉಲ್ಲೇಖಿಸಿದರೂ ಸಹ, ನಗರ ಮತ್ತು ಕೌಂಟಿ (ದ್ವೀಪ ಪ್ರದೇಶಕ್ಕೆ ಸಂಬಂಧಿಸಿದ ಸಣ್ಣ ಪ್ರದೇಶ)ಪ್ರದೇಶಗಳನ್ನು ಒಟ್ಟುಗೂಡಿಸಿ, ಹೊನೊಲುಲು ನಗರ ಮತ್ತು ಕೌಂಟಿ ಎನ್ನಲಾಗಿದೆ.
ರಾಜಕೀಯ ವಿಜ್ಞಾನ ಅಥವಾ ರಾಜ್ಯಶಾಸ್ತ್ರವು ರಾಜಕೀಯದ ವೈಜ್ಞಾನಿಕ ಅಧ್ಯಯನವಾಗಿದೆ. ಇದು ಆಡಳಿತ ಮತ್ತು ಅಧಿಕಾರದ ವ್ಯವಸ್ಥೆಗಳು ಮತ್ತು ರಾಜಕೀಯ ಚಟುವಟಿಕೆಗಳು, ರಾಜಕೀಯ ಚಿಂತನೆ, ರಾಜಕೀಯ ನಡವಳಿಕೆ ಮತ್ತು ಸಂಬಂಧಿತ ಸಂವಿಧಾನಗಳು ಮತ್ತು ಕಾನೂನುಗಳ ವಿಶ್ಲೇಷಣೆಯೊಂದಿಗೆ ವ್ಯವಹರಿಸುವ ಸಾಮಾಜಿಕ ವಿಜ್ಞಾನವಾಗಿದೆ. ಆಧುನಿಕ ರಾಜ್ಯಶಾಸ್ತ್ರವನ್ನು ಸಾಮಾನ್ಯವಾಗಿ ತುಲನಾತ್ಮಕ ರಾಜಕೀಯ, ಅಂತರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ ಸಿದ್ಧಾಂತದ ಮೂರು ಉಪವಿಭಾಗಗಳಾಗಿ ವಿಂಗಡಿಸಬಹುದು.
ನಿಯೋಲಿಥಿಕ್ ಯುಗದಲ್ಲಿ, ಹಳದಿ ನದಿ (ಎಲ್ಲೊ ರಿವರ್) ಮತ್ತು ಯಾಂಗ್ತ್ಸೆ ನದಿಯ (ಯಾಂಗ್ತ್ಸೆ ರಿವರ್) ದಂಡೆಗಳ ಮೇಲೆ, ಬೇರೆ ಬೇರೆ ಪ್ರಾದೇಶಿಕ ಕೇಂದ್ರಗಳಲ್ಲಿ, ಚೀನಾ ನಾಗರೀಕತೆಯು ಉಗಮವಾಯಿತೆಂದು ಹೇಳಲಾಗುತ್ತದೆಯಾದರೂ, ಪ್ರಮುಖವಾಗಿ ಹಳದಿ ನದಿಯೇ ಚೀನಾ ನಾಗರೀಕತೆಯ ತೊಟ್ಟಿಲು ಎಂದು ಕೂಡಾ ಹೇಳಲಾಗುತ್ತದೆ. (ca. 1700 BC - 1046 BC) ಕಾಲದ ಶಾಂಗ್ ರಾಜಮನೆತನಕ್ಕೂ ಮೊದಲೇ ಲಿಖಿತ ಚೀನಾದ ಇತಿಹಾಸ ಇದ್ದುದನ್ನು ಕಾಣಬಹುದು.
ವಾದಿರಾಜರು (ಕ್ರಿ.ಶ. ೧೪೮೦ - ೧೬೦೦) ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.ಇವರು ವ್ಯಾಸರಾಯರ ಪ್ರಮುಖ ಶಿಷ್ಯರಲ್ಲಿ ಸೋದೆಯ ಮಠಾಧಿಪತಿಗಳಾಗಿದ್ದ ವಾದಿರಾಜರೂ ಒಬ್ಬರು.ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಆತನು ಕವಿತೆ ತರ್ಕಬದ್ಧವಾದುದು.ಇವರ ವಾಗ್ವೈಖರಿಯನ್ನು ಮೆಚ್ಚಿದ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನು ಇವರಿಗೆ ಪ್ರಸಂಗಾಭರಣ ತೀರ್ಥ ಎಂಬ ಬಿರುದನ್ನು ನೀಡಿ ಗೌರವಿಸಿದರು.ಶ್ರೀಹರಿ ಭಕ್ತಿಯನ್ನು ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೆ ತಿಳಿಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಮಾಡಿದರು.ಅಷ್ಟ ಮಠಗಳಲ್ಲಿ ಈಗ ನಡೆಯುವ ಪರ್ಯಾಯೋತ್ಸವ ಪದ್ಧತಿಯನ್ನು ಪ್ರಾರಂಭಿಸಿದರು.
ಸಿಂಗಾಪುರ, ಅಧಿಕೃತವಾಗಿ ಸಿಂಗಪುರ್ ಗಣರಾಜ್ಯ, ಆಗ್ನೇಯ ಏಷ್ಯಾದಲ್ಲಿನ ಒಂದು ಸಾರ್ವಭೌಮ ನಗರ-ರಾಜ್ಯ ಮತ್ತು ದ್ವೀಪ ರಾಷ್ಟ್ರವಾಗಿದೆ. ಇದು ಭೂಮಧ್ಯದ ಉತ್ತರಕ್ಕೆ ಒಂದು ಡಿಗ್ರಿ (೧೩೭ ಕಿಲೋಮೀಟರ್ (೮೫ ಮೈಲಿ)), ಮಲಯ ಪರ್ಯಾಯ ದ್ವೀಪದ ದಕ್ಷಿಣ ತುದಿಯಲ್ಲಿ, ದಕ್ಷಿಣದ ಇಂಡೋನೇಷಿಯಾದ ರಿಯಾ ದ್ವೀಪಗಳು ಮತ್ತು ಉತ್ತರಕ್ಕೆ ಮಲೆಷ್ಯಾವನ್ನು ಹೊಂದಿದೆ. ಸಿಂಗಾಪುರ ೬೨ ಪ್ರಮುಖ ದ್ವೀಪಗಳ ಜೊತೆಗೆ ಒಂದು ಪ್ರಮುಖ ದ್ವೀಪವನ್ನು ಹೊಂದಿದೆ.
'ಆಂಗ್ಕರ್ ವಾಟ್' (ನಗರ ವತ್ತ) ಕಾಂಬೋಡಿಯಾ ದೇಶದಲ್ಲಿರುವ ಹಿಂದೂ ದೇವಾಲಯ ಸಮುಚ್ಛಯ. ಕಾಂಬೋಡಿಯಾ ದೇಶದ ಖ್ಮೇರ್(Khmer) ಸಾಮ್ರಾಜ್ಯದ ರಾಜಧಾನಿಯಾಗಿದ್ದ 'ಆಂಗ್ಕರ್' ಎಂಬಲ್ಲಿದೆ. ಇದನ್ನು ಸಾಮ್ರಾಟ ಎರಡನೆಯ ಸೂರ್ಯವರ್ಮ ೧೨ನೆಯ ಶತಮಾನದಲ್ಲಿ ಕಟ್ಟಿಸಿದನು.ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸಮುಚ್ಛಯವಾಗಿದೆ.ಇದು ಆಯತಾಕಾರದಲ್ಲಿ ೨೮೦೦ ಆಡಿ ಅಗಲ ಮತ್ತು ೩೮೦೦ ಅಡಿ ಉದ್ದವಾಗಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಬಹ್ರೇನ್ , ಅಧಿಕೃತವಾದ ಬಹ್ರೇನ್ ರಾಜ್ಯ (ಅರೇಬಿಕ್: مملكة البحرين, Mamlakat al-Baḥrayn, ವಾಸ್ತವವಾಗಿ: "ಎರಡು ಸಮುದ್ರಗಳ ರಾಜ್ಯ") ಒಂದು ಸಣ್ಣ ದ್ವೀಪಗಳ ರಾಷ್ಟ್ರ ಪರ್ಷಿಯನ್ ಗಲ್ಫ್ನಲ್ಲಿ ಅಲ್ ಖಲೀಫಾ ರಾಯಲ್ ಪ್ಯಾಮಿಲಿ ಯಿಂದ ಆಳಲ್ಪಡುತ್ತಿತ್ತು. ಸೌದಿ ಅರೇಬಿಯಾ ಪಶ್ಚಿಮಕ್ಕೆ ನೆಲೆನಿಂತಿದೆ ಮತ್ತು ಕಿಂಗ್ ಫಾಹ್ದ ಕಾಸ್ವೇ ಮಾರ್ಗವು ಬಹ್ರೇನ್ಗೆ ಸಂಪರ್ಕಿಸುತ್ತದೆ, ಅದನ್ನು 25 ನವೆಂಬರ್ 1986 ರಂದು ಅಧಿಕೃತವಾಗಿ ತೆರೆಯಲಾಯಿತು. ಖತಾರ್ ಗೆ ಆಗ್ನೇಯ ದಿಕ್ಕಿಗೆ ಬಹ್ರೇನ್ ಗಲ್ಫ್ ಇದೆ.
ಪೌಲ್ ಡೇವಿಡ್ ಹೆವ್ಸನ್(ಜನನ ಮೇ 10,1960) ಸಾಮಾನ್ಯವಾಗಿ ಆತನನ್ನು ರಂಗಮಂಚದ ಮೇಲೆ ಪ್ರಸಿದ್ದಿ ಪಡೆದ ಬೊನೊ ಎಂಬ ಹೆಸರಿಂದ ಕರೆಯಲಾಗುತ್ತದೆ.ಈತ ಐರಿಶ್ ಗಾಯಕ ಮತ್ತು ಸಂಗೀತಗಾರ,ಅತ್ಯಧಿಕ ಖ್ಯಾತಿ ಪಡೆದಿದ್ದು ಈತ ಡಬ್ಲಿನ್ ಮೂಲದ ರಾಕ್ ಬ್ಯಾಂಡ್ U2 ನಲ್ಲಿ ಪ್ರಧಾನ ಹಾಡುಗಾರನಾಗಿದ್ದಾನೆ. ಬೊನೊ ಡಬ್ಲಿನ್ ,ಐರ್ಲೆಂಡ್ ನಲ್ಲಿ ಬೆಳೆದನಲ್ಲದೇ ಮೌಂಟ್ ಟೆಂಪಲ್ ಕಾಂಪ್ರೆಹೆನ್ಸಿವ್ ಸ್ಕೂಲ್ ನಲ್ಲಿ ಕಲಿತ.ಅದೇ ಸಂದರ್ಭದಲ್ಲಿ ಆತ ತನ್ನ ಭವಿಷ್ಯದ ಪತ್ನಿ ಅಲಿ ಹೆವ್ಸನ್ ಮತ್ತು ವೃತ್ತಿ ಭವಿಷ್ಯದ U2 ದ ಸದಸ್ಯರನ್ನೂ ಭೇಟಿಯಾದ. ಬೊನೊ ಹೆಚ್ಚಾಗಿ U2 ದ ಎಲ್ಲಾ ಹಾಡುಗಳಿಗೆ ಗೀತ ರಚನೆ ಕೆಲಸ ಮಾಡಿದ್ದಾನೆ.ಅದರಲ್ಲಿ ಆತ ರಾಜಕೀಯ,ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಆತ ಬಳಸಿಕೊಂಡಿದ್ದಾನೆ.
ವಿಜಯನಗರ ಸಾಮ್ರಾಜ್ಯ:(ಕ್ರಿ.ಶ.೧೩೩೬ - ೧೬೪೬) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (ಕ್ರಿ.ಶ ೧೨೯೦ - ೧೩೨೦) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಅಮೆರಿಕಸ್ ಅಥವಾ ಅಮೆರಿಕ ವು,ಸ್ಪ್ಯಾನಿಷ್: Américaಪೋರ್ಚುಗೀಸ್:AméricaFrench: AmériqueDutch: [Amerika] Error: {{Lang}}: text has italic markup (help) ಪಶ್ಚಿಮ ಗೋಳಾರ್ಧದಲ್ಲಿರುವ ಭೂಪ್ರದೇಶ. ಅದು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಖಂಡಗಳು, ದ್ವೀಪ ಪ್ರದೇಶಗಳು ಮತ್ತು ಪ್ರಾಂತ್ಯಗಳನ್ನು ಒಳಗೊಂಡ ಹೊಸ ಜಗತ್ತಾಗಿ ರೂಪುಗೊಂಡಿದೆ. ಅಮೆರಿಕ ಎಂಬ ಪದವು ಆಂಗ್ಲಭಾಷೆಯಲ್ಲಿ ವಿಭಿನ್ನಾರ್ಥ ನೀಡುತ್ತದೆಯಾದರೂ, ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಈ ಪದದಿಂದ ಹೆಚ್ಚಾಗಿ ಮತ್ತು ಸಾಮಾನ್ಯವಾಗಿ ಪ್ರಬೋಧಿಸುತ್ತಾರೆ.
ಮಾಹಿತಿ ತಂತ್ರಜ್ಞಾನ ಅಮೇರಿಕದ ಮಾಹಿತಿ ತಂತ್ರಜ್ಞಾನ ಸಂಘದ ನಿರ್ದಿಷ್ಟದಂತೆ, "ಗಣಕಯಂತ್ರ-ಆಧಾರಿತ ಮಾಹಿತಿ ವ್ಯವಸ್ಥೆಗಳ ಅಧ್ಯಯನ, ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆ - ವಿಶೇಷವಾಗಿ ತಂತ್ರಾಂಶ ಮತ್ತು hardware." ಮಾಹಿತಿ ಎನ್ನುವದರ ಬಗ್ಗೆ ಮನುಷ್ಯನಿಗೆ ಬಹು ಪೂರ್ವದಿಂದಲೇ ಅರಿವಿದ್ದರೂ ಅದು ತಂತ್ರಜ್ಞಾನದ ಜೊತೆಗೆ ಬೆರೆತದ್ದು ಇತ್ತೀಚೆಗೆ. ಅದಕ್ಕೆ ಕಾರಣ ತಂತ್ರಜ್ಞಾನದ ತ್ವರಿತ ಬೆಳವಣಿಗೆ. ಮಾಹಿತಿಯನ್ನು ವೇಗವಾಗಿ ರವಾನಿಸುವ ತಂತ್ರಜ್ಞಾನವು ಅದನ್ನು ಶೇಖರಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನೂ ಹೊರುತ್ತದೆ.
ಭಾರತದ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಶೀಲ ಮಾರುಕಟ್ಟೆ ಅರ್ಥವ್ಯವಸ್ಥೆ ಎಂದು ವಿವರಿಸಲಾಗಿದೆ. ಪಿ.ಪಿ.ಪಿ.ವುಳ್ಳ (ಕೊಳ್ಳುವ ಶಕ್ತಿಯ ಸಾಮ್ಯತೆ) ಜಿ.ಡಿ.ಪಿ ಪ್ರಕಾರ ಭಾರತ ವಿಶ್ವದಲ್ಲೇ ಮೂರನೆಯ ಸ್ಥಾನದಲ್ಲಿದೆ ಮತ್ತು ಅಮೇರಿಕನ್ ಡಾಲರಿನಲ್ಲಿನ ಒಟ್ಟೂ ದೇಶಿಯ ಉತ್ಪನ್ನ(ಜಿ.ಡಿ.ಪಿ) ಪ್ರಕಾರ $೬೯೧.೮೭೬ ಕೋಟಿ ಹೊಂದಿ ವಿಶ್ವದಲ್ಲೇ ಐದನೆಯ ಸ್ಥಾನದಲ್ಲಿದೆ. ಐಎಂಎಫ್ ಪ್ರಕಾರ, ತಲಾವಾರು ಆದಾಯದ ಆಧಾರದಲ್ಲಿ, ೨೦೧೮ರಲ್ಲಿ ಭಾರತವು ಜಿಡಿಪಿ ಪ್ರಕಾರ ೧೩೯ನೇ (ನಾಮಮಾತ್ರದ) ಮತ್ತು ಜಿಡಿಪಿ ಪ್ರಕಾರ ೧೧೮ನೇ (ಪಿಪಿಪಿ) ಸ್ಥಾನ ಹೊಂದಿತ್ತು.೧೯೪೭ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ೧೯೯೧ರ ವರೆಗೆ, ಅನುಕ್ರಮದ ಸರ್ಕಾರಗಳು ವ್ಯಾಪಕ ಸರ್ಕಾರಿ ಹಸ್ತಕ್ಷೇಪ ಮತ್ತು ನಿಯಂತ್ರಣವುಳ್ಳ ರಕ್ಷಣಾವಾದಿ ಆರ್ಥಿಕ ನೀತಿಗಳನ್ನು ಪ್ರೋತ್ಸಾಹಿಸಿದವು; ಶೀತಲ ಸಮರದ ಅಂತ್ಯ ಮತ್ತು ೧೯೯೧ ರಲ್ಲಿ ತೀವ್ರ ಪಾವತಿ ಬಾಕಿ ಬಿಕ್ಕಟ್ಟಿನ ಕಾರಣ ಭಾರತವು ಆರ್ಥಿಕ ಉದಾರೀಕರಣದ ವಿಶಾಲ ಕಾರ್ಯಕ್ರಮವನ್ನು ಅಳವಡಿಸಿಕೊಂಡಿತು.
REDIRECT Template:Infobox canalಪನಾಮ ಕಾಲುವೆ ಯು (ಸ್ಪ್ಯಾನಿಷ್: Canal de Panamá) ಪನಾಮದಲ್ಲಿರುವ ಒಂದು 77 kilometres (48 mi) ಹಡಗು ಕಾಲುವೆಯಾಗಿದ್ದು, ಇದು ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರವನ್ನು ಸೇರಿಸುತ್ತದೆ ಹಾಗೂ ಇದು ಅಂತಾರಾಷ್ಟ್ರೀಯ ಕಡಲಿನ ವ್ಯಾಪಾರಕ್ಕೆ ಒಂದು ಪ್ರಮುಖ ನಾಲೆಯಾಗಿದೆ. 1904ರಿಂದ 1914ರವರೆಗಿನ ಅವಧಿಯಲ್ಲಿ ನಿರ್ಮಿಸಲ್ಪಟ್ಟ ಈ ಕಾಲುವೆಯಲ್ಲಿ ಆರಂಭಿಕ ದಿನಗಳಲ್ಲಿದ್ದ ಹಡುಗಗಳ ವಾರ್ಷಿಕ ದಟ್ಟಣೆಯು ಸುಮಾರು 1,000 ಹಡುಗುಗಳಿಂದ 2008ರಲ್ಲಿ 14,702 ಹಡಗುಗಳಿಗೆ ಏರಿತು, ಇದನ್ನು ಒಟ್ಟು 309.6 ದಶಲಕ್ಷ ಪನಾಮ ಕಾಲುವೆ/ಯೂನಿವರ್ಸಲ್ ಮೆಜರ್ಮೆಂಟ್ ಸಿಸ್ಟಮ್ (PC/UMS) ಟನ್ಗಳಷ್ಟೆಂದು ಅಂದಾಜಿಸಲಾಗಿದೆ. ಈ ಕಾಲುವೆಯಾದ್ಯಂತ ಒಟ್ಟು ಸುಮಾರು 815,000 ಹಡಗುಗಳು ಸಾಗಿಹೋಗಿವೆ.
ಕೋಲಾರ ಚಿನ್ನದ ಗಣಿ (ಕೆ.ಜಿ.ಎಫ್) (English: Kolar Gold Fields) ಕರ್ನಾಟಕದ ಒಂದು ಸಣ್ಣ ಗಣಿಗಾರಿಕೆ ಪಟ್ಟಣ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿದೆ.ಇಲ್ಲಿ ಗಣಿ ನೌಕರರ ಕುಟುಂಬಗಳು ವಾಸಿಸುತ್ತಿದ್ದಾರೆ.ಕೆ.ಜಿ.ಎಫ್ ಪೂರ್ವಭಾಗದಲ್ಲಿ ಒಂದು ಪರ್ವತಗಳ ಸಾಲಿದೆ,ಇದರಲ್ಲಿ ದೊಡ್ಡ ಬೆಟ್ಟ ಪರ್ವತ ಒಂದಾಗಿದೆ.ಇದು ಸಮುದ್ರ ಮಟ್ಟದಿಂದ ೩೧೯೫ ಅಡಿಯಿದ್ದು, ಅತ್ಯಂತ ಎದ್ದುಕಾಣುವ ಬಿಂದುವಾಗಿದೆ.ಕೆ.ಜಿ.ಎಫ್ ನಿಂದ ಸುಮಾರು 30 ಕಿಲೊಮೀಟರ್ ದೂರದಲ್ಲಿ ಕೋಲಾರ ಇದೆ ಹಾಗು ಸುಮಾರು 100 ಕಿಲೊಮೀಟರ್ ಅಂತರದಲ್ಲಿ ಬೆಂಗಳೂರಿದೆ.ಕೆ.ಜಿ.ಎಫ್ ಚಿನ್ನದ ಗಣಿಯನ್ನು ಕಡಿಮೆ ನಿಕ್ಷೇಪಗಳು ಮತ್ತು ಹೆಚ್ಚುತ್ತಿರುವ ಬೆಲೆಯ ಕಾರಣ ಬಿ.ಇ.ಎಂ.ಎಲ್ ಮೂಲಕ 2001 ರಲ್ಲಿ ಮುಚ್ಚಲಾಯಿತು.
ಶ್ರೀಮಂತ ಶಂಕರದೇವ (೧೪೪೯-೧೫೬೮) ೧೫ನೇ-೧೬ನೇ ಶತಮಾನದ ಅಸ್ಸಾಮಿ ಮಹಾವಿದ್ವಾಂಸ: ಒಬ್ಬ ಸಂತ-ವಿದ್ವಾಂಸ, ಕವಿ, ನಾಟಕಕಾರ, ಸಾಮಾಜಿಕ-ಧಾರ್ಮಿಕ ಸುಧಾರಕ ಮತ್ತು ಅಸ್ಸಾಮ್ನ ಸಾಂಸ್ಕೃತಿಕ ಹಾಗು ಧಾರ್ಮಿಕ ಇತಿಹಾಸದಲ್ಲಿ ಪ್ರಾಮುಖ್ಯದ ಒಬ್ಬ ವ್ಯಕ್ತಿಯಾಗಿದ್ದನು. ಅವನು ಹಿಂದಿನ ಸಾಂಸ್ಕೃತಿಕ ಸ್ಮಾರಕಗಳ ಮೇಲೆ ನಿರ್ಮಿಸಿದ್ದಕ್ಕೆ ಮತ್ತು ಸಂಗೀತ (ಬೋರ್ಗೀತ್), ನಾಟಕ ಪ್ರದರ್ಶನ (ಅಂಕಿಯಾ ನಾಟ್, ಭಾವೋನಾ), ನೃತ್ಯ (ಸತ್ರಿಯಾ), ಸಾಹಿತ್ಯಕ ಭಾಷೆಯ (ಬ್ರಜಾವಳಿ) ಹೊಸ ರೂಪಗಳನ್ನು ರೂಪಿಸುವಲ್ಲಿ ವ್ಯಾಪಕ ಮನ್ನಣೆಗೆ ಪಾತ್ರನಾಗಿದ್ದಾನೆ. ಜೊತೆಗೆ, ಅವನು ಉದ್ದಗಲ ರಚಿತ ಗ್ರಂಥಗಳು (ಶಂಕರದೇವನ ಭಾಗವತ), ಸಂಸ್ಕೃತ, ಅಸ್ಸಾಮಿ ಮತ್ತು ಬ್ರಜಾವಳಿಯಲ್ಲಿ (ಮಧ್ಯಯುಗದ ಮೈಥಿಲಿ) ಬರೆದ ಕಾವ್ಯ ಮತ್ತು ಮತಧರ್ಮಶಾಸ್ತ್ರದ ಕೃತಿಗಳ ವ್ಯಾಪಕ ಸಾಹಿತ್ಯಿಕ ಕೃತಿಗಳನ್ನು ಬಿಟ್ಟಿದ್ದಾನೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ವ್ಯವಹಾರ ನಿರ್ವಹಣೆ ನಿರ್ವಹಣೆ ಪ್ರಸ್ತಾಪನೆ ನಿರ್ವಹಣೆಯ ವ್ಯಾಖ್ಯಾನವೇನೆಂದರೆ ವಿನ್ಯಾಸ]ಮತ್ತು ಬೆಂಬಲ ಕೊಡುವ ಪರಿಸರದಲ್ಲಿ ವ್ಯಕ್ತಿಗಳು, ಗುಂಪುಗಳು ಒಟ್ಟಿಗೆ ಕೆಲಸ, ಪರಿಣಾಮಕಾರಿಯಾಗಿ ಆಯ್ಕೆ ಗುರಿಗಳನ್ನು ಸಾಧಿಸುವ ಪ್ರಕ್ರಿಯೆ ಆಗಿದೆ. ಈ ಮೂಲ ವ್ಯಾಖ್ಯಾನವನ್ನು ವಿಸ್ತರಿಸಲು ಅಗತ್ಯವಿದೆ: ೧. ವ್ಯವಸ್ಥಾಪಕರಾಗಿ, ಜನರು ವ್ಯವಸ್ಥಾಪನ ಕಾರ್ಯಗಳನ್ನು ನಿರ್ವಹಿಸಲು ಯೋಜನೆ ಸಂಘಟನಾ, ಸಿಬ್ಬಂದಿ ಮತ್ತು ನಿಯಂತ್ರಿಸುವ ಕಾರ್ಯಗಳನ್ನು ಕೈಗೊಂಡರು.
ಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್
ಅಂತರಜಾಲ ಆಧಾರಿತ ಕರೆ ಪ್ರೋಟೋಕಾಲ್ (VoIP ) ಎಂಬುದು ಅಂತರಜಾಲ ಅಥವಾ ಇನ್ನಿತರ ಅಂಶ-ವ್ಯವಸ್ಥಿತ ಜಾಲಗಳಂತಹಾ IP ಜಾಲಗಳ ಮೂಲಕ ಕರೆ ಸಂವಹನದ ಬಟವಾಡೆಗಾಗಿ ಬಳಸುವ ಸಂವಹನ ತಂತ್ರಜ್ಞಾನಗಳಿಗೆ ಬಳಸುವ ಸಾಮಾನ್ಯೀಕರಿಸಿದ ಪದವಾಗಿದೆ. ಆಗಾಗ್ಗೆ ಬಳಸಲಾಗುವ ಇನ್ನಿತರ ಪದಗಳೆಂದರೆ VoIPಗೆ ಸಮಾನವಾದ ಹಾಗೂ IP ದೂರವಾಣಿ ವ್ಯವಸ್ಥೆ , ಅಂತರ್ಜಾಲ ದೂರವಾಣಿ ವ್ಯವಸ್ಥೆ , ಬ್ರಾಡ್ಬ್ಯಾಂಡ್ (VoBB) ಆಧಾರಿತ ಕರೆ , ಬ್ರಾಡ್ಬ್ಯಾಂಡ್ ದೂರವಾಣಿ ವ್ಯವಸ್ಥೆ , ಮತ್ತು ಬ್ರಾಡ್ಬ್ಯಾಂಡ್ ದೂರವಾಣಿ . ಅಂತರಜಾಲ ದೂರವಾಣಿ ವ್ಯವಸ್ಥೆಯೆಂದರೆ — ಕರೆ, ಫ್ಯಾಸಿಮಿಲಿ/ಫ್ಯಾಕ್ಸ್, ಮತ್ತು/ಅಥವಾ ಧ್ವನಿ-ಸಂದೇಶ ಅನ್ವಯಗಳಂತಹಾ ಸಂವಹನಾ ಸೇವೆಗಳನ್ನು ಸಾರ್ವಜನಿಕ ಅಂಶವ್ಯವಸ್ಥಿತ ದೂರವಾಣಿ ಜಾಲ (PSTN)ದ ಬದಲಿಗೆ ಅಂತರಜಾಲದ ಮೂಲಕ ರವಾನಿಸುವುದು.
ರೂಢಿ ನಿಯಮಿತವಾಗಿ ಪುನರಾವರ್ತಿಸಲಾದ ವರ್ತನೆಯ ಒಂದು ವಾಡಿಕೆ ಮತ್ತು ಒಳಪ್ರಜ್ಞೆಯಿಂದ ಸಂಭವಿಸುತ್ತದೆ.ಅಮೇರಿಕನ್ ಜರ್ನಲ್ ಆಫ಼್ ಸೈಕಾಲಜಿ ರೂಢಿಯನ್ನು "ಮನೋವಿಜ್ಞಾನದ ದೃಷ್ಟಿಕೋನದಿಂದ, ಒಂದು ಮಾನಸಿಕ ಅನುಭವದ ಹಿಂದಿನ ಪುನರಾವರ್ತನೆಯ ಮೂಲಕ ಪಡೆಯಲಾದ ಹೆಚ್ಚುಕಡಿಮೆ ಸ್ಥಿರ ರೀತಿಯ ಯೋಚನೆ, ಸಮ್ಮತಿ, ಅಥವಾ ಅನಿಸಿಕೆ" ಎಂದು ವ್ಯಾಖ್ಯಾನಿಸುತ್ತದೆ." ರೂಢಿಯ ವರ್ತನೆ ಅದನ್ನು ಪ್ರದರ್ಶಿಸುವ ವ್ಯಕ್ತಿಗಳಲ್ಲಿ ಹಲವುವೇಳೆ ಗಮನಿಸಲ್ಪಡುವುದಿಲ್ಲ, ಏಕೆಂದರೆ ವಾಡಿಕೆಯ ಕಾರ್ಯಗಳನ್ನು ಕೈಗೊಂಡಾಗ ಒಬ್ಬ ವ್ಯಕ್ತಿಯು ಆತ್ಮ ವಿಶ್ಲೇಷಣೆಯಲ್ಲಿ ತೊಡಗಿಕೊಳ್ಳುವ ಅಗತ್ಯವಿಲ್ಲ. ರೂಢಿಗಳು ಕೆಲವೊಮ್ಮೆ ಕಡ್ಡಾಯವಾಗಿರುತ್ತವೆ. ರೂಢಿ ರಚನೆಯ ಪ್ರಕ್ರಿಯೆಯ ಮೂಲಕ ಹೊಸ ವರ್ತನೆಗಳು ರೂಢಿಗತವಾಗಬಹುದು.
ಸೇಂಟ್ ಲೂಸಿಯಾ ಅಟ್ಲಾಂಟಿಕ್ ಸಾಗರದ ಗಡಿಯಲ್ಲಿ ಪೂರ್ವ ಕೆರಿಬಿಯನ್ ಸಮುದ್ರದಲ್ಲಿ ವೆಸ್ಟ್ ಇಂಡೀಸ್ನಲ್ಲಿರುವ ಒಂದು ದ್ವೀಪ ರಾಷ್ಟ್ರವಾಗಿದೆ . ಈ ದ್ವೀಪವನ್ನು ಹಿಂದೆ ಐಯೊನೊಲಾ ಎಂದು ಕರೆಯಲಾಗುತ್ತಿತ್ತು, ಇದನ್ನು ಸ್ಥಳೀಯರಾದ ಅರಾವಾಕ್ಸ್ ಜನರು ದ್ವೀಪಕ್ಕೆ ಈ ಹೆಸರನ್ನು ನೀಡಿದರು ಮತ್ತು ನಂತರ ಹೆವನೊರಾ, ಎಂಬ ಹೆಸರನ್ನು ಸ್ಥಳೀಯ ಕ್ಯಾರಿಬ್ಸ್ ಜನರು ನೀಡಿದರು, ಇವರಿಬ್ಬರು ಎರಡು ಪ್ರತ್ಯೇಕ ಅಮೆರಿಂಡಿಯನ್ ಜನರು .ಇದು ಲೆಸ್ಸರ್ ಆಂಟಿಲೀಸ್ನ ವಿಂಡ್ವರ್ಡ್ ದ್ವೀಪಗಳ ಭಾಗವಾಗಿದೆ, ಇದು ಸೇಂಟ್ ವಿನ್ಸೆಂಟ್ ದ್ವೀಪದ ಉತ್ತರ/ಈಶಾನ್ಯಕ್ಕೆ, ಬಾರ್ಬಡೋಸ್ನ ವಾಯುವ್ಯ ಮತ್ತು ಮಾರ್ಟಿನಿಕ್ನ ದಕ್ಷಿಣದಲ್ಲಿದೆ. ಇದು 617 km2 (238 square miles) ರ ಭೂಪ್ರದೇಶವನ್ನು ಒಳಗೊಂಡಿದೆ ಮತ್ತು 2010 ರ ಜನಗಣತಿಯಲ್ಲಿ 165,595 ಜನಸಂಖ್ಯೆಯನ್ನು ವರದಿ ಮಾಡಿದೆ.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾಲಿನ್ಯದ ಕಾರಣದಿಂದ ಓಜೋನ ಪದರವು ಕ್ಷೀಣಿಸುತ್ತಿದೆ.
ವ್ಯಕ್ತಿತ್ವ ವಿಕಸನ ಹಾಗು ವೃತ್ತಿ ಬೆಳವಣಿಗೆ :- ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮ. ಆದರ್ಶ,ಸದಾಚಾರ,ಶ್ರದ್ಧೆ, ನಿಷ್ಠೆ, ದಕ್ಷತೆ, ಎಚ್ಚರ-ಸನ್ನಿವೇಶಗಳೊಡನೆಹೊಂದಿಕೊಳ್ಳುವ ಸಾಮರ್ಥ್ಯ, ವೃತ್ತಿಪ್ರಿಯತೆ,ಪರೋಪಕಾರ ಬುದ್ಧಿ,ಪ್ರಾಮಾಣಿಕತೆ....ಗಳು ವ್ಯಕ್ತಿತ್ವ ನಿರ್ಮಿಸುವ ಶಕ್ತಿಗಳು. ಈ ನಿಟ್ಟಿನಲ್ಲಿ ನೋಡಿದಾಗ ನಮಗೆ ವ್ಯಕ್ತಿ ಮುಖ್ಯವಲ್ಲ ವ್ಯಕ್ತಿತ್ವ ಮುಖ್ಯ ಎಂಬುದು ಅರ್ಥವಾಗುತ್ತದೆ.
ವಿವರಣೆ ಎಂದರೆ ಸಾಮಾನ್ಯವಾಗಿ ವಾಸ್ತವಾಂಶಗಳ ಒಂದು ಸಮೂಹವನ್ನು ವಿವರಿಸಲು ರಚಿಸಲಾದ ವಾಕ್ಯಗಳ ಸಮೂಹ. ಇದು ಆ ವಾಸ್ತವಾಂಶಗಳ ಕಾರಣಗಳು, ಸಂದರ್ಭ ಮತ್ತು ಪರಿಣಾಮಗಳನ್ನು ಸ್ಪಷ್ಟೀಕರಿಸುತ್ತದೆ. ವಾಸ್ತವಾಂಶಗಳು ಇತ್ಯಾದಿಗಳ ವಿವರಣೆಯು ನಿಯಮಗಳನ್ನು ಅಥವಾ ಸೂತ್ರಗಳನ್ನು ಸ್ಥಾಪಿಸಬಹುದು, ಮತ್ತು ಯಾವುದೇ ವಸ್ತುಗಳು, ಅಥವಾ ಪರೀಕ್ಷಿಸಲಾದ ವಿದ್ಯಮಾನಗಳ ಸಂಬಂಧದಲ್ಲಿ, ಅಸ್ತಿತ್ವದಲ್ಲಿರುವ ನಿಯಮಗಳು ಅಥವಾ ಸೂತ್ರಗಳನ್ನು ಸ್ಪಷ್ಟೀಕರಿಸಬಹುದು.
ಎನ್ಎವಿಎಸಿ ಎಂದೂ ಸಹ ಕರೆಯಲಾಗುವ ಭಾರತೀಯ ನೌಕಾ ಅಕಾಡೆಮಿ ಎಳಿಯಾಲಾ (ಐಎನ್ಎ) (ಏಷ್ಯಾದ ಅತೀ ದೊಡ್ಡ ನೌಕಾ ಅಕಾಡೆಮಿ) ಯು ಭಾರತೀಯ ನೌಕಾಪಡೆಯ ಸುಸಜ್ಜಿತ ನೌಕಾ ತರಬೇತಿ ಕೇಂದ್ರವಾಗಿದೆ ಮತ್ತು ಇದು ದಕ್ಷಿಣ ಭಾರತದ ಕೇರಳ ರಾಜ್ಯದ ಕಣ್ಣೂರು (ಕಣ್ಣಾನೂರು) ಜಿಲ್ಲೆಯಲ್ಲಿದೆ. ಡಿಲ್ಲಿ ಪರ್ವತಗಳ ಶ್ರೇಣಿಗಳ ನಡುವೆ, ನಿರ್ಮಲವಾದ ಕವ್ವಾಯಿ ಹಿನ್ನೀರು ಮತ್ತು ವೈಭವಯುಕ್ತ ಅರೇಬಿಯನ್ ಸಮುದ್ರದ ತಟದಲ್ಲಿ ನೆಲೆಸಿರುವ ಎನ್ಎವಿಎಸಿ ( ನೌಕಾ ಅಕಾಡೆಮಿಯ ಕಿರುನಾಮ)ವು ತನ್ನ ಆಕರ್ಷಕವಾದ ಮತ್ತು ನೆಮ್ಮದಿಯ ಪರಿಸರದಲ್ಲಿ ತರಬೇತಿಗಾಗಿ ಸಹಜ ಸುಂದರವಾದ ವಾತಾವರಣವನ್ನು ಒದಗಿಸುತ್ತದೆ. ಇಲ್ಲಿ ಭಾರತೀಯ ನೌಕಾ ಸೇನೆ ಮತ್ತು ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಸೇರಲ್ಪಡುವ ಎಲ್ಲಾ ಅಧಿಕಾರಿಗಳಿಗೆ ವಿವಿಧ ವಿಭಾಗಗಳಲ್ಲಿ ಮೂಲಭೂತ ತರಬೇತಿಯನ್ನು ನೀಡಲಾಗುತ್ತದೆ.