The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಗುರುತ್ವಾಕರ್ಷಣದಿಂದ ಒಟ್ಟಾಗಿರುವ ಅನೇಕ ನಕ್ಷತ್ರಗಳು, ಅವುಗಳ ಮಧ್ಯೆ ಇರುವ ವಾಯು, ಧೂಳು ಮತ್ತು ಅಜ್ಞಾತ ಕಪ್ಪು ದ್ರವ್ಯದ (en:Dark Matter) ಬೃಹತ ಗಾತ್ರದ ಸಮೂಹ -ಬ್ರಹ್ಮಾಂಡ; ನಕ್ಷತ್ರಗಳ ಗುಂಪು ಎರಡು ಅಥವಾ ಹೆಚ್ಚು ನಕ್ಷತ್ರಗಳ ಗುಂಪಿಗೆ ನಕ್ಷತ್ರಪುಂಜಗಳು; (ನಕ್ಷತ್ರಕೂಟ:ಉಪಯೋಗದಲ್ಲಿಲ್ಲ - ಜಾತಕ ತಾಳೆ ನೋಡುವಾಗ ಮಾತ್ರಾ ಉಪಯೋಗಿಸುವರು) ಅಥವಾ ತಾರಾಗಣವು ಕೆಲವೇ ನಕ್ಷತ್ರಗಳ ಒಂದು ಗುಂಪು ಎಂದು ಹೆಸರು. ಈ ನಕ್ಷತ್ರಕೂಟಗಳಲ್ಲಿ ಸಾಮಾನ್ಯವಾಗಿ ೧೦ ಮಿಲಿಯನ್ ಇಂದ ೧ ಟ್ರಿಲಿಯನ್ ನಕ್ಷತ್ರಗಳು ಒಂದೇ ಗುರುತ್ವದ ಕೇಂದ್ರಬಿಂದುವಿನ ಸುತ್ತ ಪ್ರದಕ್ಷಣೆ ಮಾಡುತ್ತವೆ. ಸೂರ್ಯ ಮತ್ತು ಸೌರಮಂಡಲ ಇರುವ ನಕ್ಷತ್ರಕೂಟದ ಹೆಸರು ಆಕಾಶಗಂಗೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಗೇಡು ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: If you get your hands dirty in the mud, you will get food.
ಮಂಗಳೂರು(ಉಚ್ಚಾರಣೆː), ಕರ್ನಾಟಕದ ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ, ಹಾಗೂ ಕರಾವಳಿ ಪ್ರದೇಶವಾದ ಮಂಗಳೂರು ಮೀನು ಮತ್ತು ಇತರ ಸಮುದ್ರ ಖಾದ್ಯಗಳಿಗೆ ಪ್ರಸಿದ್ದ. ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ.
ವೈಭವ್ ಸೂರ್ಯವಂಶಿ (ಜನನ ೨೭ ಮಾರ್ಚ್ ೨೦೧೧) ಒಬ್ಬ ಭಾರತೀಯ ಕ್ರಿಕೆಟಿಗ, ಇವರು ದೇಶೀಯ ಕ್ರಿಕೆಟ್ನಲ್ಲಿ ಬಿಹಾರ ಪರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಾರೆ. ಎಡಗೈ ಬ್ಯಾಟ್ಸ್ಮನ್ ಆಗಿ, ಅವರು ಜನವರಿ 2024 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಅವರು ಲಿಸ್ಟ್ ಎ ತಂಡದ ಆರಂಭಿಕ ಆಟಗಾರರಲ್ಲಿ ಅತ್ಯಂತ ಕಿರಿಯರು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯರು.
2003 ಮಾರ್ಚ್ 20ರಂದು ಪ್ರಾರಂಭಗೊಂಡ ಬಹುರಾಷ್ಟ್ರಗಳ ಸೇನಾ ತುಕಡಿಗಳು ಇರಾಕಿನ ನೆಲವನ್ನು ವಶಪಡಿಸಿಕೊಳ್ಳುವ ಸೇನಾಕಾರ್ಯಾಚರಣೆಯನ್ನು ಇರಾಕ್ ಯುದ್ಧ ಎಂದು ಕರೆಯಲಾಗುತ್ತದೆ (ಇದನ್ನು ಇರಾಕ್ ಆಕ್ರಮಣ, ಎರಡನೇ ಗಲ್ಫ್ ಯುದ್ಧ , ಹಾಗೂ ಆಪರೇಷನ್ ಇರಾಕ್ ವಿಮೋಚನಾ ಕಾರ್ಯಾಚರಣೆ ಎಂದೂ ಕರೆಯಲಾಗುತ್ತದೆ). ಅಮೇರಿಕಾದ ಅಧ್ಯಕ್ಷ ಜಾರ್ಜ್.ಡಬ್ಲ್ಯು.ಬುಷ್ ಅವರ ಮುಂಚೂಣಿಯ ಅಮೇರಿಕಾ ಹಾಗೂ ಟೋನಿ ಬ್ಲೇರ್ ಮುಖಂಡತ್ವದ ಇಂಗ್ಲೆಂಡ್ ಈ ಕಾರ್ಯಾಚರಣೆಯ ಮುಂದಾಳತ್ವ ವಹಿಸಿಕೊಂಡಿದ್ದವು. ಹೀಗೆ ವಿಮೋಚನೆಯ ಹೆಸರಿನಲ್ಲಿ ಇರಾಕಿನ ನೆಲದ ಮೇಲೆ ಕಾಲೂರಿದ ಸೇನೆಯನ್ನು ಇತ್ತೀಚೆಗೆ ತೆರವುಗೊಳಿಸಲಾಯಿತು.
ಜಾಕಿ ಚಾನ್, SBS, MBE (ಹುಟ್ಟಿದಾಗ ಇಟ್ಟ ಹೆಸರು ಚಾನ್ ಕಾಂಗ್ ಸ್ಯಾಂಗ್, 陳港生; ಹುಟ್ಟಿದ್ದು 1954ರ ಏಪ್ರಿಲ್ 7ರಂದು) ಓರ್ವ ಹಾಂಗ್ ಕಾಂಗ್ ಮೂಲದ ನಟ, ಚಲನಾ ನೃತ್ಯ ಸಂಯೋಜಕ, ಚಲನಚಿತ್ರೋದ್ಯಮಿ, ಹಾಸ್ಯನಟ, ನಿರ್ಮಾಪಕ, ಕದನ ಕಲೆಯ ಕಲಾವಿದ, ಚಿತ್ರಕಥಾ ಲೇಖಕ, ವಾಣಿಜ್ಯೋದ್ಯಮಿ, ಗಾಯಕ ಮತ್ತು ಸಾಹಸ ಪ್ರದರ್ಶನ ನಿರ್ವಾಹಕನಾಗಿದ್ದಾನೆ. ಆತನ ಚಲನಚಿತ್ರಗಳಲ್ಲಿನ, ಆತನ ದೊಂಬರಾಟದಂಥ ಹೊಡೆದಾಟದ ಶೈಲಿ, ಕಾಲೋಚಿತವಾಗಿ ನಗೆಯುಕ್ಕಿಸುವ ಸಾಮರ್ಥ್ಯ, ಸುಧಾರಿತ ಶಸ್ತ್ರಾಸ್ತ್ರಗಳು ಹಾಗೂ ನಾವೀನ್ಯತೆಯ ಸಾಹಸ ಪ್ರದರ್ಶನಗಳ ಬಳಕೆಗೆ ಆತ ಖ್ಯಾತಿಯನ್ನು ಪಡೆದಿದ್ದಾನೆ. 1970ರ ದಶಕದಿಂದಲೂ ಜಾಕಿ ಚಾನ್ ಅಭಿನಯಿಸುತ್ತಾ ಬಂದಿದ್ದು, ಇದುವರೆಗೂ 100 ಹೆಚ್ಚಿನ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾನೆ.
ಜಯದೇವಿತಾಯಿ ಲಿಗಾಡೆ -ಕನ್ನಡದ ಹಾಗುಮರಾಠಿ ಭಾಷೆಯ ಸಾಹಿತಿಗಳು, ಆಧ್ಯಾತ್ಮ ಚಿಂತನಕಾರರು. ಕುಟುಂಬವತ್ಸಲೆ, ಸಾಹಿತ್ಯಸಾಧಕಿ, ಸಮಾಜಸೇವಕಿ ಹೀಗೆ ತ್ರಿವೇಣಿ ಸಂಗಮವಾಗಿದ್ದ ಈ ಜಂಗಮತಾಯಿ ತಾಯ್ನುಡಿಯ ಸೇವೆಗಾಗಿ ಶ್ರಮಿಸಿ ದವರು. ಕನ್ನಡ ನುಡಿಗೆ, ಕನ್ನಡ ನಾಡಿಗೆ ತನ್ನನ್ನು ಅರ್ಪಿಸಿಕೊಂಡು ಅಜರಾಮರ ಕೀರ್ತಿಪಾತ್ರರಾದ ಶ್ರೀಮತಿ ಜಯದೇವಿ ತಾಯಿ ಲಿಗಾಡೆ ಅವರ ಜೀವನ ದರ್ಶನವೆಂದರೆ ಅದೊಂದು ಯಶೋಗಾಥೆ.
ಅಂಬರೀಶ್ (ಮಳವಳ್ಳಿ ಹುಚ್ಚೇಗೌಡ ಅಮರನಾಥ್) (೨೯ ಮೇ ೧೯೫೨ - ೨೪ ನವೆಂಬರ್ ೨೦೧೮) ಭಾರತೀಯ ಚಲನಚಿತ್ರ ನಟ ಮತ್ತು ಕರ್ನಾಟಕ ರಾಜ್ಯದ ಒಬ್ಬ ರಾಜಕಾರಣಿಯಾಗಿದ್ದರು. ಪುಟ್ಟಣ್ಣ ಕಣಗಾಲ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಹಾವು (೧೯೭೨) ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ಖಳ ನಟ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ಹಂತದೊಂದಿಗೆ ಪ್ರಾರಂಭವಾಯಿತು. ವಾಣಿಜ್ಯಿಕವಾಗಿ ಯಶಸ್ಸು ಗಳಿಸಿದ ಅನೇಕ ಚಿತ್ರಗಳಲ್ಲಿ ಸ್ವತಃ ಪ್ರಮುಖ ಖಳನಟನಾಗಿ ಸ್ಥಾಪನೆಗೊಂಡ ನಂತರ, ಅನೇಕ ಸಿನೆಮಾಗಳಲ್ಲಿ ನಾಯಕನಟನಾಗಿ ನಟಿಸಿದರು.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಪ್ರಕ್ರೀಯೆಯಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಅರ್ನಾಲ್ಡ್ ಅಲೋಯಿಸ್ ಶ್ವಾರ್ಜಿನೆಗ್ಗರ್ (English pronunciation: /ˈʃwɔrtsənɛɡər/German: [ˈaɐnɔlt ˈaloʏs ˈʃvaɐtsənˌʔɛɡɐ]ಜುಲೈ ೩೦, ೧೯೪೭ರಲ್ಲಿ ಜನನ); ಆಸ್ಟ್ರಿಯಾ ಅಮೇರಿಕದ ದೇಹಧಾಡ್ಯಪಟು, ನಟ, ಉದ್ಯಮಿ ಮತ್ತು ರಾಜಕಾರಣಿ ಆಗಿದ್ದು, ಪ್ರಸ್ತುತ ಕ್ಯಾಲಿಪೋರ್ನಿಯಾದ ೩೮ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಲಿದ್ದಾರೆ. ತನ್ನ ಹದಿನೈದರ ಹರಯದಿಂದಲೇ ಶ್ವಾರ್ಜಿನೆಗ್ಗರ್ ದೈಹಿಕ ಕಸರತ್ತುಗಳನ್ನು ಆರಂಭಿಸಿದರು. ೨೨ನೇ ವಯಸ್ಸಿನಲ್ಲಿಯೇ ಮಿ.ಯುನಿವರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು ಮತ್ತು ಮಿ.ಒಲಂಪಿಯಾ ಸ್ಪರ್ಧೆಯಲ್ಲಿ ಸತತವಾಗಿ ಏಳು ಬಾರಿ ವಿಜೇತರಾದರು.
ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.
ಸಂಭೋಗ ಭಂಗಿ ಎಂದರೆ ಜನರು ಲೈಂಗಿಕ ಸಂಭೋಗ ಅಥವಾ ಇತರ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಳಸುವ ದೇಹದ ಭಂಗಿ. ಲೈಂಗಿಕ ಕ್ರಿಯೆಗಳನ್ನು ಅದರಲ್ಲಿ ಭಾಗವಹಿಸುವವರು ಆ ಕ್ರಿಯೆಗಳನ್ನು ಕೈಗೊಳ್ಳಲಿಕ್ಕೆ ಅನುಸರಿಸುವ ಭಂಗಿಗಳಿಂದ ವಿವರಿಸಲಾಗುತ್ತದೆ. ಲೈಂಗಿಕ ಸಂಭೋಗ ಎಂಬುದು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹಕ್ಕೆ ಇನ್ನೊಬ್ಬರು ತಮ್ಮ ಲೈಂಗಿಕ ಅವಯವವನ್ನು ತುರುಕಿಸುವುದೇ ಆಗಿದ್ದರೂ, ಲೈಂಗಿಕ ಅವಯವವನ್ನು ತುರುಕಿಸದೆ ಮಾಡುವ ಲೈಂಗಿಕ ಭಂಗಿಳು ಸಹ ಪ್ರಚಾರದಲ್ಲಿವೆ.
ಬಿಸಿಲು ಎಂದರೆ ಸೂರ್ಯನು ಹೊರಸೂಸಿದ ವಿದ್ಯುತ್ಕಾಂತೀಯ ವಿಕಿರಣದ ಒಂದು ಭಾಗ, ವಿಶೇಷವಾಗಿ ಅತಿಗೆಂಪು, ಗೋಚರ ಮತ್ತು ನೇರಳಾತೀತ ಬೆಳಕು. ಭೂಮಿಯ ಮೇಲೆ, ಬಿಸಿಲು ವಾತಾವರಣದ ಮೂಲಕ ಸೋಸಲ್ಪಡುತ್ತದೆ, ಮತ್ತು ಸೂರ್ಯನು ದಿಗಂತದ ಮೇಲಿದ್ದಾಗ ಸೂರ್ಯಪ್ರಕಾಶವಾಗಿ ಪ್ರಕಟವಾಗುತ್ತದೆ. ನೇರ ಸೌರ ವಿಕಿರಣವು ಮೋಡಗಳಿಂದ ಪ್ರತಿಬಂಧಗೊಳ್ಳದಿದ್ದಾಗ, ಅದು ಬಿಸಿಲಾಗಿ ಅನುಭವಿಸಲ್ಪಡುತ್ತದೆ.
ಮಿಯಾಮಿ ನಗರವು pronounced /maɪˈæmi/ಅಥವಾ /maɪˈæmə/, ಅಮೇರಿಕ ಸಂಸ್ಥಾನಗಳಲ್ಲಿರುವ, ನೈಋತ್ಯಫ್ಲೋರಿಡಾದ, ಅಟ್ಲಾಂಟಿಕ್ ತೀರ ಪ್ರದೇಶದಲ್ಲಿರುವ ಅತ್ಯಂತ ಪ್ರಮುಖ ಮತ್ತು ದೊಡ್ಡ ನಗರವಾಗಿದೆ. ಫ್ಲೋರಿಡಾದ ಅತ್ಯಂತ ಪ್ರಖ್ಯಾತ ಪ್ರಾಂತವಾದ, ಮಿಯಾಮಿ ದೇಡ್ ಪ್ರಾಂತ್ಯದ ಆಸನ ಸ್ಥಳ ಎಂದೇ, ಮಿಯಾಮಿ ನಗರವನ್ನು ಗುರುತಿಸಲಾಗುತ್ತದೆ. ದಕ್ಷಿಣ ಫ್ಲೋರಿಡಾ ಮಹಾನಗರದ, ಪ್ರಮುಖ ಹಾಗೂ ಬಹುಮುಖ್ಯ ಪಟ್ಟಣವಾಗಿರುವ ಫ್ಲೋರಿಡಾದ ಜನಸಂಖ್ಯೆ ಸುಮಾರು ೫,೪೧೪,೭೧೨; ಇದು ಅಮೇರಿಕಾದ ೭ನೆಯ ಅತಿ ದೊಡ್ಡ ನಗರವಾಗಿದೆ.
ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರು (ಇಂಗ್ಲೀಷ್: Rao Bahadhur Dharmapravartha Gubbi Thotadappa), (೧೮೩೮-೧೯೧೦) (ಸ್ಥಳ:ಗುಬ್ಬಿ) ಒಬ್ಬ ವ್ಯಾಪಾರಿ ಹಾಗೂ ಲೋಕೋಪಕಾರಿಯಾಗಿದ್ದರು. ದೇಶದಾದ್ಯಂತದಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರವಾಸಿಗರಿಗೆ ಉಚಿತ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಿದ್ದರು. ಆ ಸ್ಥಳಕ್ಕೆ "ಗುಬ್ಬಿ ತೋಟದಪ್ಪನವರ ಛತ್ರ"ಎಂಬ ಹೆಸರು ಬಂತು.
ಬೆಂಗಳೂರು : ಕರ್ನಾಟಕ ರಾಜ್ಯದ ಅತಿ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ ಹಾಗೂ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರವಾಗಿದೆ, ಪ್ರಸ್ತುತ ಬೆಂಗಳೂರು ತಾಲ್ಲೂಕು 408 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿ ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಬ್ರಿಟಿಷರ ಆಕ್ರಮಣ ಕಾಲದಿಂದಲೇ ಒಂದು ದೃಷ್ಟಿಯಲ್ಲಿ ಆರಂಭವಾಗಿ, ೧೯ನೆಯ ಶತಮಾನದ ನಡುಗಾಲದಿಂದ ಕ್ರಮೇಣ ತೀವ್ರವಾಗಿ, ೨೦ನೆಯ ಶತಮಾನದಲ್ಲಿ ವ್ಯಾಪಕವಾಗಿ ಹಬ್ಬಿ, ೧೯೪೭ರಲ್ಲಿ ಯಶಸ್ವಿಯಾಗಿ ಪರ್ಯವಸಾನ ಹೊಂದಿನ ಭಾರತೀಯ ಸ್ವಾತಂತ್ರ್ಯ ಚಳವಳಿಯ ಅಂಗವಾಗಿದ್ದೂ ವಿಶಿಷ್ಟವಾಗಿ ವಿಕಾಸಗೊಂಡ ಕರ್ನಾಟಕ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಸ್ಥೂಲವಾಗಿ ಮೂರು ಕಾಲಗಳಾಗಿ ವಿಂಗಡಿಸಬಹುದಾಗಿದೆ.
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ ಸ್ಥಾಪಿತವಾಗಿರುವ ಪಿಟ್ಸ್ಬರ್ಗ್ (pronounced /ˈpɪtsbərɡ/), ಪೆನ್ಸಿಲ್ವೇನಿಯಾವು ರಾಜ್ಯದ ಎರಡನೆಯ-ಅತಿ ದೊಡ್ದದಾದ ನಗರವಾಗಿದೆ ಮತ್ತು ಅಲಗೇನಿ ಪ್ರಾಂತದ ಪ್ರಾಂತ ಅಧಿಕಾರ ಸ್ಥಾನವಾಗಿದೆ.GR6 2000 ವರ್ಷದ ಗಣತಿಯ ಪ್ರಕಾರ ಇದರ ಜನಸಂಖ್ಯೆಯು 334,563 ಆಗಿತ್ತು; 2009 ರ ವೇಳೆಗೆ ಈ ಜನಸಂಖ್ಯೆಯು 311,647 ಕ್ಕೆ ಇಳಿಯಿತು ಎಂದು ಅಂದಾಜಿಸಲಾಗಿದೆ. 2009 ರಲ್ಲಿ ಎಳು-ಪ್ರಾಂತ ಮಹಾನಗರ ಪ್ರದೇಶಗಳ ಜನಸಂಖ್ಯೆಯು 2,354,957 ಆಗಿತ್ತು. ಮಧ್ಯಭಾಗದ ಪಿಟ್ಸ್ಬರ್ಗ್ ಗಣನೀಯ ಪ್ರಮಾಣದ ಆರ್ಥಿಕ ಪ್ರಭಾವವನ್ನು ಉಳಿಸಿಕೊಳ್ಳುತ್ತದೆ, ಇದು ದೇಶದಲ್ಲಿ ನಗರ ಕೇಂದ್ರಗಳಲ್ಲಿ ಉದ್ಯೋಗಗಳಲ್ಲಿ 25ನೇ ಸ್ಥಾನವನ್ನು ಪಡೆದಿದೆ (ಮತ್ತು ಉದ್ಯೋಗದ ಸಾಂದ್ರತೆಯಲ್ಲಿ 6ನೆಯ ಸ್ಥಾನವನ್ನು ಪಡೆದಿದೆ).
ದಿ ಪ್ರಿನ್ಸಿಪಲ್ಸ್ ಆಫ್ ಬ್ಯಾಂಕಿಂಗ್
ದಿ ಪ್ರಿನ್ಸಿಪಲ್ಸ್ ಆಫ್ ಬ್ಯಾಂಕಿಂಗ್ ಎಂಬುದು ಬಾಂಗ್ಲಾದೇಶ ಮೂಲದ ಆಂಗ್ಲ ಬ್ಯಾಂಕಿಂಗ್ ವೃತ್ತಿಗಾರ ಮತ್ತು ಶಿಕ್ಷಣತಜ್ಞ ಮೂರದ್ ಚೌಧರಿ ಬರೆದ ೨೦೧೨ ರ ಕಾಲ್ಪನಿಕವಲ್ಲದ ಪುಸ್ತಕವಾಗಿದೆ.
ಮಹಾಭಾರತ ಮತ್ತು ರಾಮಾಯಣ ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯವಾಗಿದ್ದು ಇವುಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುತ್ತಾರೆ. ಮಹಾಭಾರತ ಇದು ಕುರುಕ್ಷೇತ್ರ ಯುದ್ಧದ ಘಟನೆಗಳು ಮತ್ತು ನಂತರದ ಘಟನೆಗಳನ್ನು ವಿವರಿಸುತ್ತದೆ, ಇದು ರಾಜಮನೆತನದ ಸೋದರ ಸಂಬಂಧಿಗಳ ಎರಡು ಗುಂಪುಗಳಾದ ಕೌರವರು ಮತ್ತು ಪಾಂಡವರ ನಡುವಿನ ಉತ್ತರಾಧಿಕಾರದ ಯುದ್ಧವಾಗಿದೆ. ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು.
ಡಿಡಿ ಚಂದನ ದೂರದರ್ಶನ ಅಡಿಯಲ್ಲಿ ಪ್ರಸಾರ ಭಾರತಿ ಒಡೆತನದ ಮತ್ತು ನಿರ್ವಹಿಸುತ್ತಿರುವ ಕನ್ನಡ ಟಿವಿ ಚಾನೆಲ್ ಆಗಿದ್ದು, ಬೆಂಗಳೂರು ಮತ್ತು ಕಲ್ಬುರ್ಗಿಯಲ್ಲಿರುವ ದೂರದರ್ಶನ ಸ್ಟುಡಿಯೋಗಳಿಂದ ಬೆಂಬಲಿತವಾಗಿದೆ. 1994 ರಲ್ಲಿ ಪ್ರಾರಂಭವಾದ ಡಿಡಿ ಚಂದನವು ಮನರಂಜನಾ ಧಾರಾವಾಹಿಗಳು, ಇನ್ಫೋಟೈನ್ಮೆಂಟ್ ಕಾರ್ಯಕ್ರಮಗಳು, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರ ಕಾರ್ಯಕ್ರಮಗಳನ್ನು ಅದರ ಪ್ರಮುಖ ವಿಷಯವಾಗಿ ಹೊಂದಿದೆ. ಟೆರೆಸ್ಟ್ರಿಯಲ್ ಮೋಡ್ನಲ್ಲಿ, ಕರ್ನಾಟಕದ 81.7% ಜನಸಂಖ್ಯೆಗೆ ಡಿಡಿ ಚಂದನ ಲಭ್ಯವಿದೆ.
ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಜೆನ್ನಾ ಜೇಮ್ಸನ್, (ಜೆನ್ನಾ ಮೇರಿ ಮಸ್ಸೊಲಿ ಜನನ; ಎಪ್ರಿಲ್ 9, 1974) ಅಮೆರಿಕಾದ ಉದ್ಯಮಿ ಮತ್ತು ಮಾಜಿ ಕಾಮಪ್ರಚೋದಕ ಚಿತ್ರಗಳ ನಟಿ, ಅವರನ್ನು ವಿಶ್ವದ ಪೋರ್ನ್ ಚಿತ್ರಗಳ ಅತ್ಯಂತ ಪ್ರಸಿದ್ಧ ನಟಿ ಮತ್ತು "ಪೋರ್ನ್ ಚಿತ್ರಗಳ ರಾಣಿ" ಎಂದು ಕರೆಯಲಾಗಿದೆ. ಬತ್ತಲೆ ನರ್ತಕಿ ಮತ್ತು ಗ್ಲಾಮರ್ ರೂಪದರ್ಶಿಯಾಗಿ ಆರಂಭದಲ್ಲಿ ಕೆಲಸ ಮಾಡಿದ್ದ ಅವರು, ನಂತರ 1993ರಲ್ಲಿ ಕಾಮಪ್ರಚೋದಕ ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. 1996ರ ಹೊತ್ತಿಗೆ, ಮೂರು ಪ್ರಮುಖ ಕಾಮಪ್ರಚೋದಕ ಚಿತ್ರ ನಿರ್ಮಾಣ ಸಂಸ್ಥೆಗಳಿಂದ ಪ್ರತ್ಯೇಕವಾಗಿ 'ಅಗ್ರ ಹೊಸ ಮುಖ' ಪ್ರಶಸ್ತಿ ಪಡೆದಿದ್ದರು.
ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) ಹಿಂದೂ ಸ್ವರಾಜ್ಯದ ಸ್ಥಾಪಕರು.ಇವರು ೧೬೩೦ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿಎಂಬಲ್ಲಿ ಜನಿಸಿದರು.ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು.
ನೈಸರ್ಗಿಕ ಸಂಪನ್ಮೂಲಗಳು ಭೂಮಿ ಅಥವಾ ಕಚ್ಛಾ ವಸ್ತುಗಳನ್ನು ) ಆರ್ಥಿಕಮಾನದಂಡ ಎಂದು ಉಲ್ಲೇಖಿಸಲಾಗಿದೆ) ಪರಿಸರದಲ್ಲಿ ಮಾನವರಿಂದ ಸ್ಥಾನಪಲ್ಲಟಕ್ಕೆ ಈಡಾಗದೇ ಇರುವಾಗ ಅವುಪ್ರಾಕೃತಿಕ ರೂಪದಲ್ಲಿ ಇರುತ್ತವೆ. ನೈಸರ್ಗಿಕ ಸಂಪನ್ಮೂಲವನ್ನು ವಿವಿಧ ಪರಿಸರ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಜೀವವೈವಿಧ್ಯತೆಯ ಆಧಾರದ ಮೇಲೆ ವಿಂಗಡಿಸಲಾಗಿದೆ. ನೈಸರ್ಗಿಕ ಸಂಪನ್ಮೂಲಗಳೆಲ್ಲವೂಪರಿಸರ ಜನ್ಯ.
ನೋಡಿ:ವಾಯುಗುಣ ಬದಲಾವಣೆ ಹವಾಮಾನವು ವಾತಾವರಣದ ಸ್ಥಿತಿ, ಬಿಸಿ ಅಥವಾ ಶೀತಲ, ತೇವ ಅಥವಾ ಶುಷ್ಕ, ಶಾಂತ ಅಥವಾ ಬಿರುಗಾಳಿಯಿಂದ ಕೂಡಿದ, ನಿಚ್ಚಳ ಅಥವಾ ಮೋಡಕವಿದ ಅನ್ನುವಷ್ಟರ ಮಟ್ಟಿಗೆ. ಬಹುತೇಕ ಹವಾಮಾನ ವಿದ್ಯಮಾನಗಳು ಪರಿವರ್ತನ ಗೋಳದಲ್ಲಿ ಸಂಭವಿಸುತ್ತವೆ, ಸಮಗೋಳದ ಸ್ವಲ್ಪ ಕೆಳಗೆ. ಹವಾಮಾನವು ಸಾಮಾನ್ಯವಾಗಿ ದಿನನಿತ್ಯದ ಉಷ್ಣಾಂಶ ಮತ್ತು ಮಳೆ ಪ್ರಮಾಣವನ್ನು ನಿರ್ದೇಶಿಸಿದರೆ, ವಾಯುಗುಣವು ಸಮಯದ ದೀರ್ಘಾವಧಿಯಲ್ಲಿ ಸರಾಸರಿ ವಾತಾವರಣ ಸ್ಥಿತಿಗಳಿಗಾಗಿ ಬಳಸಲಾಗುವ ಪದ.
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ಮೊಘಲ್ ಸಾಮ್ರಾಜ್ಯ (ಉರ್ದು:: مغل باد شاہ) ಭಾರತೀಯ ಉಪಖಂಡದ ಉತ್ತರ ಭಾಗಗಳನ್ನು ೧೫೨೬ ರಿಂದ ಆಳಿದ ಮುಖ್ಯ ಸಾಮ್ರಾಜ್ಯಗಳಲ್ಲಿ ಒಂದು. ಮೊಘಲ್ ಸಾಮ್ರಾಜ್ಯದ ಸ್ಥಾಪನೆ ೧೫೨೬ ರಲ್ಲಿ ಬಾಬರ್ ನಿಂದ ನಡೆಯಿತು - ಮೊದಲ ಪಾಣಿಪಟ್ ಯುದ್ಧದಲ್ಲಿ ಇಬ್ರಾಹಿಮ್ ಲೋದಿಯನ್ನು ಸೋಲಿಸಿದ ನಂತರ. ಹುಮಾಯೂನ್ ನ ಕಾಲದಲ್ಲಿ ಶೇರ್ ಷಾ ಮೊಘಲ್ ಸಾಮ್ರಾಜ್ಯವನ್ನು ಸೋಲಿಸಿದರೂ, ನಂತರ ಅಕ್ಬರ್ ನ ಕೆಳಗೆ ಮೇಲೇರಲಾರಂಭಿಸಿದ ಮೊಘಲ್ ಸಾಮ್ರಾಜ್ಯ ಔರಂಗಜೇಬನ ಕಾಲದ ವರೆಗೂ ಬೆಳೆಯಿತು.
ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು. ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕ_ಕ್ರಿಯೆ ಎನ್ನಲಾಗದು.