The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಹಲವಷ್ಟು ನಿಗೂಢತೆಗಳನ್ನು ತನ್ನ ಒಡಲಾಳದಲ್ಲಿ ಅಡಗಿಸಿಕೊಂಡಿರುವ ಬರ್ಮುಡಾ ತ್ರಿಕೋನ (ಬರ್ಮುಡಾ ಟ್ರಯಾಂಗಲ್) ಸೈತಾನನ ತ್ರಿಕೋನ ಎಂದೇ ಪ್ರಸಿದ್ಧಿ ಪಡೆದಿದೆ. ಉತ್ತರ ಅಂಟ್ಲಾಂಟಿಕ ಸಾಗರದ ಪಶ್ಚಿಮ ಭಾಗದಲ್ಲಿ ಕಂಡುಬರುವ ಬರ್ಮುಡಾ ತ್ರಿಕೋನ ವೈಜ್ಞಾನಿಕತೆಗೆ ಸವಾಲಾಗಿದೆ. ಸೈತಾನನ ತ್ರಿಕೋನ ಎಂದು ಕುಖ್ಯಾತವಾಗಿರುವ ಈ ಬರ್ಮುಡಾ ತ್ರಿಕೋನ ದ ಮೇಲೆ ಹಾದು ಹೋಗುವ ವಿಮಾನಗಳು, ಹಡಗುಗಳು ನಿಗೂಢವಾಗಿ ಕಣ್ಮರೆಯಾಗುತ್ತದೆ.
ಮಿಯಾಮಿ ನಗರವು pronounced /maɪˈæmi/ಅಥವಾ /maɪˈæmə/, ಅಮೇರಿಕ ಸಂಸ್ಥಾನಗಳಲ್ಲಿರುವ, ನೈಋತ್ಯಫ್ಲೋರಿಡಾದ, ಅಟ್ಲಾಂಟಿಕ್ ತೀರ ಪ್ರದೇಶದಲ್ಲಿರುವ ಅತ್ಯಂತ ಪ್ರಮುಖ ಮತ್ತು ದೊಡ್ಡ ನಗರವಾಗಿದೆ. ಫ್ಲೋರಿಡಾದ ಅತ್ಯಂತ ಪ್ರಖ್ಯಾತ ಪ್ರಾಂತವಾದ, ಮಿಯಾಮಿ ದೇಡ್ ಪ್ರಾಂತ್ಯದ ಆಸನ ಸ್ಥಳ ಎಂದೇ, ಮಿಯಾಮಿ ನಗರವನ್ನು ಗುರುತಿಸಲಾಗುತ್ತದೆ. ದಕ್ಷಿಣ ಫ್ಲೋರಿಡಾ ಮಹಾನಗರದ, ಪ್ರಮುಖ ಹಾಗೂ ಬಹುಮುಖ್ಯ ಪಟ್ಟಣವಾಗಿರುವ ಫ್ಲೋರಿಡಾದ ಜನಸಂಖ್ಯೆ ಸುಮಾರು ೫,೪೧೪,೭೧೨; ಇದು ಅಮೇರಿಕಾದ ೭ನೆಯ ಅತಿ ದೊಡ್ಡ ನಗರವಾಗಿದೆ.
ಮಂಗಳೂರು(ಉಚ್ಚಾರಣೆː), ಕರ್ನಾಟಕದ ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ, ಹಾಗೂ ಕರಾವಳಿ ಪ್ರದೇಶವಾದ ಮಂಗಳೂರು ಮೀನು ಮತ್ತು ಇತರ ಸಮುದ್ರ ಖಾದ್ಯಗಳಿಗೆ ಪ್ರಸಿದ್ದ. ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ.
ಗುರುತ್ವಾಕರ್ಷಣದಿಂದ ಒಟ್ಟಾಗಿರುವ ಅನೇಕ ನಕ್ಷತ್ರಗಳು, ಅವುಗಳ ಮಧ್ಯೆ ಇರುವ ವಾಯು, ಧೂಳು ಮತ್ತು ಅಜ್ಞಾತ ಕಪ್ಪು ದ್ರವ್ಯದ (en:Dark Matter) ಬೃಹತ ಗಾತ್ರದ ಸಮೂಹ -ಬ್ರಹ್ಮಾಂಡ; ನಕ್ಷತ್ರಗಳ ಗುಂಪು ಎರಡು ಅಥವಾ ಹೆಚ್ಚು ನಕ್ಷತ್ರಗಳ ಗುಂಪಿಗೆ ನಕ್ಷತ್ರಪುಂಜಗಳು; (ನಕ್ಷತ್ರಕೂಟ:ಉಪಯೋಗದಲ್ಲಿಲ್ಲ - ಜಾತಕ ತಾಳೆ ನೋಡುವಾಗ ಮಾತ್ರಾ ಉಪಯೋಗಿಸುವರು) ಅಥವಾ ತಾರಾಗಣವು ಕೆಲವೇ ನಕ್ಷತ್ರಗಳ ಒಂದು ಗುಂಪು ಎಂದು ಹೆಸರು. ಈ ನಕ್ಷತ್ರಕೂಟಗಳಲ್ಲಿ ಸಾಮಾನ್ಯವಾಗಿ ೧೦ ಮಿಲಿಯನ್ ಇಂದ ೧ ಟ್ರಿಲಿಯನ್ ನಕ್ಷತ್ರಗಳು ಒಂದೇ ಗುರುತ್ವದ ಕೇಂದ್ರಬಿಂದುವಿನ ಸುತ್ತ ಪ್ರದಕ್ಷಣೆ ಮಾಡುತ್ತವೆ. ಸೂರ್ಯ ಮತ್ತು ಸೌರಮಂಡಲ ಇರುವ ನಕ್ಷತ್ರಕೂಟದ ಹೆಸರು ಆಕಾಶಗಂಗೆ.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
ಬೆಂಗಳೂರು : ಕರ್ನಾಟಕ ರಾಜ್ಯದ ಅತಿ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ ಹಾಗೂ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರವಾಗಿದೆ, ಪ್ರಸ್ತುತ ಬೆಂಗಳೂರು ತಾಲ್ಲೂಕು 408 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಸಂಪತ್ತಿನ ಸೋರಿಕೆಯ ಸಿದ್ಧಾಂತವು ಭಾರತದಲ್ಲಿನ ವಸಾಹತುಶಾಹಿ ಆಡಳಿತದ ಬಗ್ಗೆ ರಾಷ್ಟ್ರೀಯವಾದಿಗಳು ಪ್ರತಿಪಾದಿಸಿದ ಆರ್ಥಿಕ ವಿಮರ್ಶೆಯನ್ನು ಉಲ್ಲೇಖಿಸುತ್ತದೆ. ಭಾರತದಿಂದ ಇಂಗ್ಲೆಂಡ್ಗೆ ಸಂಪತ್ತಿನ ಒಂದು ಮಾರ್ಗದ ಹರಿವನ್ನು ಅದು ವಿವರಿಸುತ್ತದೆ. ಪ್ರತಿಕೂಲ ವ್ಯಾಪಾರ ಸಮತೋಲನದ ಪರಿಣಾಮವಾಗಿ ದೇಶದಿಂದ ಚಿನ್ನ ಮತ್ತು ಬೆಳ್ಳಿ ಹೊರಗೆ ಹರಿಯುವ ಬಗ್ಗೆ ಈ ಸಿದ್ದಾಂತವು ಪ್ರತಿಪಾದಿಸುತ್ತದೆ.
ಐ.ಎನ್.ಎಸ್. ಅರಿಹಂತ್ (ಐ.ಎನ್.ಎಸ್.- ಇಂಡಿಯನ್ ನೇವಲ್ ಶಿಪ್/ಇಂಡಿಯನ್ ನೇವಲ್ ಸಬ್-ಮೆರೈನ್ - ಭಾರತೀಯ ನೌಕಾ ಹಡಗು/ಭಾರತೀಯ ನೌಕಾ ಜಲಾಂತರ್ಗಾಮಿ ಹಡಗು) ಭಾರತದ ಅಣು ಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳ ಅರಿಹಂತ್ ವರ್ಗದ ಪ್ರಮುಖ ನೌಕೆಯಾಗಿದೆ. ೬,೦೦೦ ಟನ್ನುಗಳಷ್ಟು ತೂಗುವ ಈ ನೌಕೆಯನ್ನು ಅಡ್ವಾನ್ಸ್ಡ್ ಟೆಕ್ನಾಲಜಿ ವೆಸಲ್ (ಸುಧಾರಿತ ತಂತ್ರಜ್ಞಾನ ನೌಕೆ) ಎಂಬ ಯೋಜನೆಯ ಸಮನ್ವಯ ಸುಮಾರು ೨.೯ ಬಿಲಿಯನ್ ಯು.ಎಸ್.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಗೇಡು ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: If you get your hands dirty in the mud, you will get food.
ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ನೈಸರ್ಗಿಕ ರಬ್ಬರ್ ಒಂದು ಎಲಾಸ್ಟೋಮರ್ (ಸ್ಥಿತಿಸ್ಥಾಪಕ ಹೈಡ್ರೋಕಾರ್ಬನ್ ಪಾಲಿಮರ್) ಆಗಿದೆ. ಮೂಲತಃ ಇದನ್ನು ಕೆಲವು ಗಿಡಗಳ ಸಸ್ಯರಸದಲ್ಲಿ ಕಂಡುಬರುವ ಹಾಲಿನಂಥ ಕಲಿಲವಾದ ಲೇಟೆಕ್ಸ್ನಿಂದ ಪಡೆದುಕೊಳ್ಳಲಾಗಿತ್ತು. ಸಸ್ಯಗಳಿಂದ ದ್ರವವನ್ನು ಹೊರತೆಗೆಯಲಾಗುತ್ತಿತ್ತು, ಅಂದರೆ ಮರದ ತೊಗಟೆಯೊಳಗೆ ಕಚ್ಚು ಮಾಡಿ, ಲೇಟೆಕ್ಸ್ ರಸವನ್ನು ಸಂಗ್ರಹಿಸಿ ಬಳಕೆಯ ರಬ್ಬರ್ ಆಗಿ ಸಂಸ್ಕರಿಸಲಾಗುತ್ತಿತ್ತು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮೀಟಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಯ ನೂತನ ಅಧ್ಯಕ್ಷರನ್ನಾಗಿ ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ್ ಅವರನ್ನು ಆಯ್ಕೆಮಾಡಿ ಎಐಸಿಸಿ ಆದೇಶ ಹೊರಡಿಸಿದೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ವೀರಾಸ್ವಾಮಿ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ವಿ.ರವಿಚಂದ್ರನ್ ಎನ್ನುವ ಹೆಸರಿನಲ್ಲಿ ಪ್ರಸಿದ್ಧರು. ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿಪರದೆಗೆ ಹೊಸರಂಗು ತಂದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಅನೇಕ ರೀಮೇಕ್ ಸಿನಿಮಾಗಳನ್ನು ಕನ್ನಡಕ್ಕೆ ತಂದರೂ ಮೂಲಸಿನಿಮಾದ ಛಾಯೆ ಇರದ ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಸೊಗಡಿನ ಸೂಪರ್ ಹಿಟ್ ಗಳನ್ನು ನೀಡಿದ್ದಾರೆ.
ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರ
ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಅಲ್ಲಿರುವ ಒಂದು ಪ್ರಸಿದ್ದ ಸ್ಥಳ. ತುಂಗಭದ್ರ ನದಿಯಿಂದ ೨ಕಿಮಿ, ಹೂವಿನ ಹಡಗಲಿ ಇಂದ ೪೦ಕಿಮಿ , ರಾಣೆಬೆನ್ನುರಿನಿಂದ ೩೪ಕಿಮಿ ದೂರದಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದೇ ರೀತಿಯ ಹೇಳಿಕೆ ಇಲ್ಲಿಯ ಕಾರಣಿಕೋತ್ಸವದಲ್ಲಿ ಕೇಳಿಬಂದಿತ್ತು.
ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಾಜ್ಯದ ಮೊದಲ ಬೇಡಿಕೆಗಳನ್ನು ಮಾಡಲಾಗಿತ್ತು.
ವೈಭವ್ ಸೂರ್ಯವಂಶಿ (ಜನನ ೨೭ ಮಾರ್ಚ್ ೨೦೧೧) ಒಬ್ಬ ಭಾರತೀಯ ಕ್ರಿಕೆಟಿಗ, ಇವರು ದೇಶೀಯ ಕ್ರಿಕೆಟ್ನಲ್ಲಿ ಬಿಹಾರ ಪರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಾರೆ. ಎಡಗೈ ಬ್ಯಾಟ್ಸ್ಮನ್ ಆಗಿ, ಅವರು ಜನವರಿ 2024 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಅವರು ಲಿಸ್ಟ್ ಎ ತಂಡದ ಆರಂಭಿಕ ಆಟಗಾರರಲ್ಲಿ ಅತ್ಯಂತ ಕಿರಿಯರು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯರು.
ಸುದೀಪ ಅಥವಾ ಕಿಚ್ಚ ಸುದೀಪ (ಜನನ ೨ ಸೆಪ್ಟೆಂಬರ್ ೧೯೭೩) ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ, ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರಗಳಾದ ಸ್ಪರ್ಶ (2000), ಹುಚ್ಚ (2001), ನಂದಿ (2002), ಕಿಚ್ಚ (2003), ಸ್ವಾತಿ ಮುತ್ತು (2003), ಮೈ ಆಟೋಗ್ರಾಫ್ (2006), ನಂ 73 ಶಾಂತಿ ನಿವಾಸ (2007), ಮುಸ್ಸಂಜೆ ಮಾತು (2008), ವೀರ ಮದಕರಿ (2009), ಜಸ್ಟ್ ಮಾತ್ ಮಾತಲ್ಲಿ (2010), ಕೆಂಪೇಗೌಡ (2011), ತೆಲುಗು-ತಮಿಳು ದ್ವಿಭಾಷಾ ಚಿತ್ರ ಈಗ (2012) ಮತ್ತು ಹಿಂದಿ ಚಲನಚಿತ್ರ ದಬಾಂಗ್ 3 (2019) ಇವರ ಪ್ರಮುಖ ಚಿತ್ರಗಳು. ಹುಚ್ಚ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗಾಗಿ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ ಪಡೆದರು.
ಕುದುರೆಯು (ಎಕೂಸ್ ಫ಼ೆರೂಸ್ ಕಬಾಲೂಸ್) ಎಕೂಸ್ ಫ಼ೆರೂಸ್ ಅಥವಾ ಕಾಡು ಕುದುರೆಯ ಎರಡು ಅಸ್ತಿತ್ವದಲ್ಲಿರುವ ಉಪಪ್ರಜಾತಿಗಳ ಪೈಕಿ ಒಂದು. ಅದು ಜೀವಿವರ್ಗೀಕರಣ ಕುಟುಂಬ ಎಕ್ವಿಡೈಗೆ ಸೇರಿದ ಒಂದು ಬೆಸ ಕಾಲ್ಬೆರಳುಗಳಿರುವ ಗೊರಸುಳ್ಳ ಸಸ್ತನಿ. ಕುದುರೆಯು ಕಳೆದ ೪೫ ರಿಂದ ೫೫ ಮಿಲಿಯ ವರ್ಷಗಳಲ್ಲಿ ಚಿಕ್ಕ ಬಹು ಕಾಲ್ಬರೆಳುಗಳುಳ್ಳ ಪ್ರಾಣಿಯಿಂದ ಇಂದಿನ ದೊಡ್ಡ, ಒಂಟಿ ಕಾಲ್ಬೆರಳಿನ ಪ್ರಾಣಿಯಾಗಿ ವಿಕಾಸಗೊಂಡಿದೆ.
ಈ ಲೇಖನದಲ್ಲಿ ನರ್ಮದಾ ನದಿಯ ದಕ್ಷಿಣ ಭಾಗದ ಭಾರತೀಯ ಪರ್ಯಾಯದ್ವೀಪದಲ್ಲಿರುವ ದಕ್ಷಿಣ ಭಾರತದಲ್ಲಿ ಕಂಡು ಬರುವ ಪಕ್ಷಿಗಳ ಹೆಸರನ್ನು ಪಟ್ಟಿ ಮಾಡಲಾಗಿದೆ. ಆಂಧ್ರಪ್ರದೇಶದ ರೋಲ್ಲಪಾಡು, ಕರ್ನಾಟಕದ ನಾಗರಹೊಳೆ (ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ) ಮತ್ತು ಬಂಡೀಪುರ, ಕೇರಳದ ರಾಜಾಮಲೈ (ಎರವೀಕುಲಮ್ ರಾಷ್ಟ್ರೀಯ ಉದ್ಯಾನವನ) ಮತ್ತು ಪೆರಿಯಾರ್ ರಾಷ್ಟ್ರೀಯ ಉದ್ಯಾನವನ, ಮಧುಮಲೈ ರಾಷ್ಟ್ರೀಯ ಉದ್ಯಾನವನ, ಉದಕಮಂಡಲಮ್, ಅಣ್ಣಾಮಲೈನ ಇಂದಿರಾಗಾಂಧಿ ವನ್ಯಮೃಗ ಸಂರಕ್ಷಣಾ ವನ, ತಮಿಳುನಾಡಿನ ವೇದಾಂತಂಗಳ್ ಮತ್ತು ಕೋಡಿಕ್ಕರೈ ಗಳು ದಕ್ಷಿಣ ಭಾರತದ ಪಕ್ಷಿವೀಕ್ಷಣಾ ಸ್ಥಳಗಳೆಂದು ಹೆಸರುವಾಸಿಯಾಗಿವೆ.
ಬರ/ಕ್ಷಾಮ/ಜಲಕ್ಷಾಮ (ಡ್ರಾಉಟ್ ಅಥವಾ ಡ್ರೌಟ್ [ಪ್ರಾಚೀನ ಪ್ರಯೋಗ]) ಎಂದರೆ ಪ್ರದೇಶವೊಂದರಲ್ಲಿ ಜಲ/ನೀರಿನ ಲಭ್ಯತೆ/ಸರಬರಾಜಿನಲ್ಲಿ ಉಂಟಾದ ಕೊರತೆಯು ತಿಂಗಳುಗಳು ಅಥವಾ ವರ್ಷಗಳ ಕಾಲ ವಿಸ್ತರಿಸಿದಾಗ ಉಂಟಾಗುವ ಪರಿಸ್ಥಿತಿ. ಸಾಧಾರಣವಾಗಿ ಯಾವುದೇ ಪ್ರದೇಶವು ಸತತವಾಗಿ ಸರಾಸರಿ ಮಳೆ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯನ್ನು ಪಡೆಯುತ್ತಿದ್ದರೆ ಹೀಗಾಗುತ್ತದೆ. ಅದರಿಂದ ಪೀಡಿತವಾದ ಪ್ರದೇಶದ ಪರಿಸರ ವ್ಯವಸ್ಥೆ ಮತ್ತು ಕೃಷಿವ್ಯವಸ್ಥೆಗಳ ಮೇಲೆ ಇದು ಗಣನೀಯ ಪ್ರಮಾಣದ ಪ್ರಭಾವ ಬೀರಬಹುದಾಗಿರುತ್ತದೆ.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಪ್ರಕ್ರೀಯೆಯಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.
ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು. ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕ_ಕ್ರಿಯೆ ಎನ್ನಲಾಗದು.
ವಿಶ್ವ ಪರಿಸರ ದಿನವನ್ನು ( ಡಬ್ಲ್ಯೂಇಡಿ ) ವಾರ್ಷಿಕವಾಗಿ ಜೂನ್ 5 ರಂದು ಆಚರಿಸಲಾಗುತ್ತದೆ ಮತ್ತು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮವನ್ನು ಉತ್ತೇಜಿಸುತ್ತದೆ. ಇದು ಅನೇಕ ಸರ್ಕಾರೇತರ ಸಂಸ್ಥೆಗಳು, ವ್ಯವಹಾರಗಳು, ಸರ್ಕಾರಿ ಘಟಕಗಳಿಂದ ಬೆಂಬಲಿತವಾಗಿದೆ ಮತ್ತು ಪರಿಸರವನ್ನು ಬೆಂಬಲಿಸುವ ಪ್ರಾಥಮಿಕ ವಿಶ್ವಸಂಸ್ಥೆಯ ಎಲ್ಲರಿಗೂ ತಲುಪುವ ಜಾಗೃತಿ ದಿನವನ್ನು ಪ್ರತಿನಿಧಿಸುತ್ತದೆ. ಮೊದಲ ಬಾರಿಗೆ 1973 ರಲ್ಲಿ ಆಯೋಜಿಸಲಾಯಿತು, ಇದು ಸಮುದ್ರ ಮಾಲಿನ್ಯ, ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ ಏರಿಕೆ, ಸುಸ್ಥಿರ ಅಭಿವೃದ್ಧಿ ಮತ್ತು ವನ್ಯಜೀವಿ ಅಪರಾಧಗಳಂತಹ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿದೆ.
ಬಿ.ಆರ್.ಲಕ್ಷ್ಮಣರಾವ್, ಅವರು ಕನ್ನಡದ ಪ್ರೇಮಕವಿ, ನವೋದಯ, ನವ್ಯ, ಬಂಡಾಯ ಮೊದಲಾದ ಯಾವ ಗುಂಪಿಗೂ ಸೇರದ ಕವಿ, ಭಾವಗೀತೆಗಳ ಕವಿ. ಲಕ್ಷ್ಮಣರಾಯರ 'ಅಮ್ಮ, ನಿನ್ನ ಎದೆಯಾಳದಲ್ಲಿ',‘ಸುಬ್ಭಾಭಟ್ಟರ ಮಗಳೇ’,‘ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು',' ಜಾಲಿಬಾರಿನಲ್ಲಿ ಕೂತ ಪೋಲಿ ಗೆಳೆಯರು' ಮುಂತಾದ ಕವಿತೆಗಳು ಜನಪ್ರಿಯವಾಗಿವೆ. ಈ ಪದ್ಯಗಳು, ಹಲವು ವೇಳೆ ಕೆ.ಎಸ್.ನ ಅವರ ‘ಶ್ಯಾನುಭೋಗರ ಮಗಳು’, ‘ರಾಯರು ಬಂದರು ಮಾವನ ಮನೆಗೆ’ ಪದ್ಯಗಳಿಗೆ ಸರಿಹೋಲಿಕೆಯಂತಿವೆ.
ಚೀನಾ (ಆಂಗ್ಲ ಭಾಷೆಯಲ್ಲಿ: China ಚೈನ; ಪಾರಂಪರಿಕ ಚೀನಿ ಭಾಷೆಯಲ್ಲಿ: 中國 ; ಸರಳೀಕೃತ ಚೀನಿ ಭಾಷೆಯಲ್ಲಿ: 中国 ; ಕನ್ನಡದಲ್ಲಿ ಅಕ್ಷರಸಹ: ಜಾಂಗುಓ) ಪೂರ್ವ ಏಷ್ಯಾದಲ್ಲಿ ಪುರಾತನ ಕಾಲದಿಂದಿರುವ ಒಂದು ಸಂಸ್ಕೃತಿಕ ಪ್ರದೇಶ. ಎರಡನೇ ವಿಶ್ವಯುದ್ಧದ ನಂತರದ ಸಮಯದಲ್ಲಿ ನಡೆದ ಚೀನಿ ಅಂತಃಕಲಹದ ಪರಿಣಾಮವಾಗಿ ಈಗ ಇದು ಎರಡು ದೇಶಗಳಾಗಿ ವಿಂಗಡಿತವಾಗಿದೆ: ಚೀನಾ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಚೀನಿ ಜನರ ಗಣರಾಜ್ಯವು ಚೀನದ ಖಂಡ ಭಾಗ, ಹಾಗೂ ಬಹುಮಟ್ಟಿಗೆ ಸ್ವಯಂಪ್ರಭುತ್ವ ಹೊಂದಿರುವ ಪ್ರಾಂತ್ಯಗಳಾದ ಹಾಂಗ್ ಕಾಂಗ್ (೧೯೯೭ರಿಂದ) ಮತ್ತು ಮಕೌ (೧೯೯೯ರಿಂದ) ಗಳ ಮೇಲೆ ನಿಯಂತ್ರಣ ಹೊಂದಿದೆ. ಚೀನಿ ಗಣರಾಜ್ಯವು ಟೈವಾನ ಮತ್ತದರ ಸುತ್ತಲಿನ ದ್ವೀಪಗಳ ಮೇಲೆ ನಿಯಂತ್ರಣ ಹೊಂದಿದೆ.
ಅಣ್ಣಾಮಲೈಯಾರ್ ದೇವಸ್ಥಾನ ( ಅರುಣಾಚಲೇಶ್ವರ ದೇವಸ್ಥಾನ ಎಂದೂ ಕರೆಯುತ್ತಾರೆ) ಭಾರತದ ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದಲ್ಲಿರುವ ಅರುಣಾಚಲ ಬೆಟ್ಟದ ತಳದಲ್ಲಿರುವ ಶಿವ ದೇವರಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಪಂಚ ಭೂತ ಸ್ಥಲಗಳು ಮತ್ತು ನಿರ್ದಿಷ್ಟವಾಗಿ ಬೆಂಕಿಯ ಅಂಶ ಅಥವಾ ಅಗ್ನಿಯ ಅಂಶಗಳಿಗೆ ಸಂಬಂಧಿಸಿದ ದೇವಾಲಯಗಳಲ್ಲಿ ಒಂದಾದ ಶೈವ ಧರ್ಮದ ಹಿಂದೂ ಪಂಥಕ್ಕೆ ಇದು ಮಹತ್ವದ್ದಾಗಿದೆ. ಶಿವನನ್ನು ಅರುಣಾಚಲೇಶ್ವರ ಅಥವಾ ಅಣ್ಣಾಮಲೈಯರ್ ಎಂದು ಪೂಜಿಸಲಾಗುತ್ತದೆ ಮತ್ತು ಲಿಂಗದಿಂದ ಪ್ರತಿನಿಧಿಸಲಾಗುತ್ತದೆ, ಅವನ ವಿಗ್ರಹವನ್ನು ಅಗ್ನಿ ಲಿಂಗ ಎಂದು ಕರೆಯಲಾಗುತ್ತದೆ.
ನೋಡಿ:ವಾಯುಗುಣ ಬದಲಾವಣೆ ಹವಾಮಾನವು ವಾತಾವರಣದ ಸ್ಥಿತಿ, ಬಿಸಿ ಅಥವಾ ಶೀತಲ, ತೇವ ಅಥವಾ ಶುಷ್ಕ, ಶಾಂತ ಅಥವಾ ಬಿರುಗಾಳಿಯಿಂದ ಕೂಡಿದ, ನಿಚ್ಚಳ ಅಥವಾ ಮೋಡಕವಿದ ಅನ್ನುವಷ್ಟರ ಮಟ್ಟಿಗೆ. ಬಹುತೇಕ ಹವಾಮಾನ ವಿದ್ಯಮಾನಗಳು ಪರಿವರ್ತನ ಗೋಳದಲ್ಲಿ ಸಂಭವಿಸುತ್ತವೆ, ಸಮಗೋಳದ ಸ್ವಲ್ಪ ಕೆಳಗೆ. ಹವಾಮಾನವು ಸಾಮಾನ್ಯವಾಗಿ ದಿನನಿತ್ಯದ ಉಷ್ಣಾಂಶ ಮತ್ತು ಮಳೆ ಪ್ರಮಾಣವನ್ನು ನಿರ್ದೇಶಿಸಿದರೆ, ವಾಯುಗುಣವು ಸಮಯದ ದೀರ್ಘಾವಧಿಯಲ್ಲಿ ಸರಾಸರಿ ವಾತಾವರಣ ಸ್ಥಿತಿಗಳಿಗಾಗಿ ಬಳಸಲಾಗುವ ಪದ.
ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್(ಸಂಮೇಪಾ), 'ಎಸ್ಸೆಂಪಿ' ಎಂದು ಚಿಕ್ಕದಾಗಿ ಇಂಗ್ಲೀಷ್ ಬಾಷೆಯಲ್ಲಿ ಕರೆಯಲ್ಪಡುವ, ತಾಂತ್ರಿಕ ಶಿಕ್ಷಣದಲ್ಲಿ ಮೂರು ವರ್ಷದ ಡಿಪ್ಲಮೋವನ್ನು ನೀಡುವ ಮತ್ತು ಸಹವಿದ್ಯಾಬ್ಯಾಸದ ಒಂದು ಖಾಸಗಿ ವಿದ್ಯಾಲಯವಾಗಿದೆ. ಸಂಮೇಪಾ ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಜೊತೆಗೆ ಸಂಯೋಜನೆ ಆಗಿರುವುದಲ್ಲದೆ, ಕರ್ನಾಟಕ ರಾಜ್ಯ ಸರ್ಕಾರದಿಂದ ಐದರಲ್ಲಿ ನಾಲ್ಕು ವಿಭಾಗಗಳು ವೇತಾನುದಾನವನ್ನು ಕೂಡ ಪಡೆಯುತ್ತಲಿವೆ.
ಸಂಭೋಗ ಭಂಗಿ ಎಂದರೆ ಜನರು ಲೈಂಗಿಕ ಸಂಭೋಗ ಅಥವಾ ಇತರ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಳಸುವ ದೇಹದ ಭಂಗಿ. ಲೈಂಗಿಕ ಕ್ರಿಯೆಗಳನ್ನು ಅದರಲ್ಲಿ ಭಾಗವಹಿಸುವವರು ಆ ಕ್ರಿಯೆಗಳನ್ನು ಕೈಗೊಳ್ಳಲಿಕ್ಕೆ ಅನುಸರಿಸುವ ಭಂಗಿಗಳಿಂದ ವಿವರಿಸಲಾಗುತ್ತದೆ. ಲೈಂಗಿಕ ಸಂಭೋಗ ಎಂಬುದು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹಕ್ಕೆ ಇನ್ನೊಬ್ಬರು ತಮ್ಮ ಲೈಂಗಿಕ ಅವಯವವನ್ನು ತುರುಕಿಸುವುದೇ ಆಗಿದ್ದರೂ, ಲೈಂಗಿಕ ಅವಯವವನ್ನು ತುರುಕಿಸದೆ ಮಾಡುವ ಲೈಂಗಿಕ ಭಂಗಿಳು ಸಹ ಪ್ರಚಾರದಲ್ಲಿವೆ.
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.
ಎಲೆಕ್ಟ್ರಾನ್ ಅಥವಾ ಋಣವಿದ್ಯುತ್ಕಣ - ಇದು ಋಣ ವಿದ್ಯುದಾವೇಶವನ್ನು ಹೊಂದಿರುವ ಒಂದು ಮೂಲ ಉಪಪರಮಾಣು ಕಣ. ಗಿರಕಿ-½ ಲೆಪ್ಟಾನ್ ಗುಂಪಿನಲ್ಲಿದ್ದು ವಿದ್ಯುತ್ಕಾಂತೀಯ ಒಡನಾಟಗಳಲ್ಲಿ ಭಾಗವಹಿಸುವ ಈ ಕಣವು ಪ್ರೋಟಾನ್ ಅಥವಾ ಧನವಿದ್ಯುತ್ ಕಣದ ೧೮೩೬ನೇ ೧ರಷ್ಟು ದ್ರವ್ಯರಾಶಿಯನ್ನು ಹೊಂದಿದೆ. ಪರಮಾಣು ಕೇಂದ್ರದಲ್ಲಿನ ಪ್ರೋಟಾನ್ ಮತ್ತು ನ್ಯೂಟ್ರಾನ್ಗಳ ಜೊತೆ ಸೇರಿ ಎಲೆಕ್ಟ್ರಾನ್ಗಳು ಪರಮಾಣುಗಳನ್ನು ರಚಿಸುತ್ತವೆ.
ಲೀ ಕ್ವಾನ್ ಯೀವ್ (ಜನನ ಹ್ಯಾರಿ ಲೀ ಕ್ವಾನ್ ಯೀವ್ ೧೬ ಸೆಪ್ಟೆಂಬರ್ ೧೯೨೩ - ೨೩ ಮಾರ್ಚ್ ೨೦೧೫), LKY ಎಂದೇ ಖ್ಯಾತರಾದ ಲೀ, ೧೯೫೫ರಿಂದ ೧೯೯೧ರವರೆಗೆ ಸ್ವತಂತ್ರ ಸಿಂಗಾಪುರ್ ದೇಶದ ಪ್ರಧಾನ ಮಂತ್ರಿಯಾಗಿ, ನಂತರ ೨೦ ವರುಷಗಳ ಕಾಲ ಹಿರಿಯ-ಸಲಹೆಗಾರರಾಗಿ ಸಿಂಗಾಪುರವನ್ನು ಶ್ರೀಮಂತ ರಾಷ್ಟ್ರವಾಗಿಸಿದರು. ಲೀ ಅವರ ನಾಯಕತ್ವದಲ್ಲಿ ಸಿಂಗಾಪುರ ಕೇವಲ ಒಂದು ತಲೆಮಾರಿನಲ್ಲಿಯೇ ಹಿಂದುಳಿದ ದೇಶದಿಂದ, ವಿಶ್ವದ ಸಂಪದ್ಯುಕ್ತ ರಾಷ್ಟ್ರವಾಗಿ ಬದಲಾಗಿದೆ.ನಾಲ್ಕು ಏಷ್ಯನ್ ಹುಲಿಗಳಲ್ಲಿ ಸಿಂಗಾಪುರ ಒಂದಾಗಿದೆ, ಇದು ಲೀ ಅವರ ಹೆಗ್ಗಳಿಕೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.