The most-visited English Wikipedia articles, updated daily. Learn more...
ಸಿಂಹಾಸನವು ದೊರೆ ಅಥವಾ ಗಣ್ಯವ್ಯಕ್ತಿಯ ಅಧಿಕಾರದ ಪೀಠವಾಗಿರುತ್ತದೆ, ವಿಶೇಷವಾಗಿ ರಾಜ್ಯಾಧಿಕಾರದ ಸಂದರ್ಭಗಳಲ್ಲಿ ಸಾರ್ವಭೌಮನು ಕುಳಿತುಕೊಳ್ಳುವ ಪೀಠ. ಸಾಮಾನ್ಯವಾಗಿ ಸಿಂಹಾಸನವು ಉಳಿದ ಪೀಠಗಳಿಗಿಂತ ಎತ್ತರವಾಗಿದ್ದು ವೇದಿಕೆ ಅಥವಾ ಜಗಲಿ ಮೇಲೆ ಕರೆದೊಯ್ಯಲು ಮೆಟ್ಟಿಲುಗಳಿರುತ್ತವೆ. ಹಲವುವೇಳೆ (ಆದರೆ ಯಾವಾಗಲೂ ಅಲ್ಲ), ಸಿಂಹಾಸನವು ರಾಷ್ಟ್ರ ಅಥವಾ ಅಲ್ಲಿನ ಜನರು ನಂಬಿರುವ ಒಂದು ತತ್ವಶಾಸ್ತ್ರ ಸಂಬಂಧಿ ಅಥವಾ ಧಾರ್ಮಿಕ ಸಿದ್ಧಾಂತಕ್ಕೆ ಕಟ್ಟಲ್ಪಟ್ಟಿರುತ್ತದೆ.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಮೋಹನ್‌ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
ವಿಶ್ವ ಸ್ತನ್ಯಪಾನ ವಾರ (ಡಬ್ಲ್ಯೂಬಿಡಬ್ಲ್ಯೂ) ವಾರ್ಷಿಕ ಆಚರಣೆಯಾಗಿದ್ದು , ಇದನ್ನು ಪ್ರತಿವರ್ಷ ಆಗಸ್ಟ್ 1 ರಿಂದ ಆಗಸ್ಟ್ 7 ರವರೆಗೆ 120 ಕ್ಕೂ ಹೆಚ್ಚು ದೇಶಗಳಲ್ಲಿ ನಡೆಸಲಾಗುತ್ತದೆ.WBW ವೆಬ್ಸೈಟ್ನ ಅಂಕಿಅಂಶಗಳ ಪ್ರಕಾರ, ಪ್ರಪಂಚದ ಸ್ತನ್ಯಪಾನ ಸಪ್ತಾಹ 2010 ರ ವರೆಗೆ 488 ಸಂಘಟನೆಗಳು ಮತ್ತು 406,620 ಜನ ಭಾಗವಹಿಸುವವರೊಂದಿಗೆ 79 ದೇಶಗಳಲ್ಲಿ 540 ಕಾರ್ಯಕ್ರಮಗಳು ನಡೆದಿವೆ.ಸ್ತನ್ಯಪಾನ ಕ್ರಿಯೆಗಾಗಿ ವಿಶ್ವ ಅಲೈಯನ್ಸ್ , WHO ಮತ್ತು UNICEF, WBW ಯ ಸಂಘಟಿತವಾಗಿದ್ದು, ಮಗು ಜನಿಸಿದ ಮೊದಲ ಆರು ತಿಂಗಳ ಕಾಲ ವಿಶೇಷ ಎದೆ ಹಾಲುಣಿಸುವಿಕೆಯನ್ನು ಉತ್ತೇಜಿಸುವ ಗುರಿಯೊಂದಿಗೆ 1991ರಲ್ಲಿ ಆರಂಭಿಸಲಾಯಿತು ಸ್ತನ್ಯಪಾನ ,ಮಹತ್ವದ ಪೋಷಕಾಂಶಗಳನ್ನು ಒದಗಿಸುತ್ತದೆ, ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ನ್ಯುಮೋನಿಯಾ ,ಪ್ರಾಣಾಂತಿಕ ರೋಗಗಳಿಂದ ರಕ್ಷಣೆ ಮತ್ತು ಬೆಳವಣಿಗೆಯನ್ನು ಅಭಿವೃದ್ಧಿಪಡಿಸುತ್ತದೆ.
ಸಲಹೆಯು (ಸೂಚನೆ, ಬುದ್ಧಿವಾದ) ಯಾವುದೋ ಸಂದರ್ಭದಲ್ಲಿ ಪ್ರಸಾರಮಾಡಿದ ನಿರ್ದಿಷ್ಟ ಪರಿಸ್ಥಿತಿಗಳ ಬಗ್ಗೆ ವೈಯಕ್ತಿಕ ಅಥವಾ ಸಾಂಸ್ಥಿಕ ಅಭಿಪ್ರಾಯಗಳು, ನಂಬಿಕೆ ವ್ಯವಸ್ಥೆಗಳು, ಮೌಲ್ಯಗಳು, ಶಿಫಾರಸುಗಳು ಅಥವಾ ಮಾರ್ಗದರ್ಶನವನ್ನು ಮತ್ತೊಬ್ಬ ವ್ಯಕ್ತಿ, ಗುಂಪು ಅಥವಾ ಪಕ್ಷಕ್ಕೆ ಸಂಬಂಧಿಸುವ ಒಂದು ರೂಪ. ಹಲವುವೇಳೆ ಇದನ್ನು ಕಾರ್ಯ ಮತ್ತು/ಅಥವಾ ನಡತೆಯ ಮಾರ್ಗದರ್ಶಿಯಾಗಿ ನೀಡಲಾಗುತ್ತದೆ. ಸ್ವಲ್ಪ ಹೆಚ್ಚು ಸರಳವಾಗಿ ಹೇಳಿದರೆ, ಸಲಹಾ ಸಂದೇಶವು ಒಂದು ಸಮಸ್ಯೆಯನ್ನು ನಿಭಾಯಿಸಲು, ನಿರ್ಧಾರವನ್ನು ಮಾಡಲು, ಅಥವಾ ಒಂದು ಪರಿಸ್ಥಿತಿಯನ್ನು ನಿರ್ವಹಿಸುವ ಬಗ್ಗೆ ಯೋಚಿಸಿರಬಹುದಾದ, ಹೇಳಿರಬಹುದಾದ ಅಥವಾ ಮಾಡಬಹುದಾದ ಶಿಫಾರಸು.
ಚಾಮುಂಡೇಶ್ವರಿ ಹಿಂದೂಧರ್ಮದಲ್ಲಿ, ಚಾಮುಂಡಿ ಎಂದೂ ಪರಿಚಿತವಾಗಿರುವ ಹಿಂದೂ ದೇವಿಮಾತೆಯಾದ ದೇವಿಯ ಭಯಾನಕ ರೂಪ ಮತ್ತು ಸಪ್ತ ಮಾತೃಕೆಯರ ಪೈಕಿ ಒಬ್ಬಳು. ಅವಳು ಯೋಧೆ ದುರ್ಗಾ ದೇವಿಯ ಪರಿಚಾರಕಿಯರಾದ ಅರವತ್ತ ನಾಲ್ಕು ಅಥವಾ ಎಂಬತ್ತೊಂದು ತಾಂತ್ರಿಕ ದೇವತೆಗಳಾದ, ಮುಖ್ಯ ಯೋಗಿನಿಗಳ ಪೈಕಿ ಕೂಡ ಒಬ್ಬಳು. ಈ ಹೆಸರು ಚಾಮುಂಡಿಯು ಕೊಂದ ಇಬ್ಬರು ಅಸುರರಾದ ಚಂಡ ಮತ್ತು ಮುಂಡರ ಸಂಯೋಗವಾಗಿದೆ.
ಹಲಸಿನ ಹಣ‍್ಣು ಸಂಸ್ಕ್ರತದಲ್ಲಿ 'ಪನಸ' ಎಂದು ಕರೆಯುವ, ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರುಳ್ಳ ಇಂಗ್ಲಿಷ್ನಲ್ಲಿ ಜಾಕ್ ಫ‍್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ನು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳ ಗೊಂಡಿದೆ. ಹತ್ತರಂದ ಹನ್ನೆರಡು ಮೀಟರ್ ಗಳಷ್ಟು ಎತ್ತರಕ್ಕೆ ಬೆಳೆಯುವ ಹಲಸಿನ ಮರ, ಹಸಿರು ಎಲೆಗಳಿಂದ ಆವ್ರತವಾಗಿದೆ. ಹಲಸಿನ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮನ್ ಗಳು, ಸೆರೊಟಿನಿನ್, ಬೀಟಾ ಕ್ಯಾರೋಟಿನ್, ಸೋಡಿಯಮ್, ಕ್ಯಾಲ್ಶಿಯಮ್, ಪೊಟಾಶಿಯಮ್ ಅಂಶಗಳಿವೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಸಂಭೋಗ ಭಂಗಿ ಎಂದರೆ ಜನರು ಲೈಂಗಿಕ ಸಂಭೋಗ ಅಥವಾ ಇತರ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಳಸುವ ದೇಹದ ಭಂಗಿ. ಲೈಂಗಿಕ ಕ್ರಿಯೆಗಳನ್ನು ಅದರಲ್ಲಿ ಭಾಗವಹಿಸುವವರು ಆ ಕ್ರಿಯೆಗಳನ್ನು ಕೈಗೊಳ್ಳಲಿಕ್ಕೆ ಅನುಸರಿಸುವ ಭಂಗಿಗಳಿಂದ ವಿವರಿಸಲಾಗುತ್ತದೆ. ಲೈಂಗಿಕ ಸಂಭೋಗ ಎಂಬುದು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹಕ್ಕೆ ಇನ್ನೊಬ್ಬರು ತಮ್ಮ ಲೈಂಗಿಕ ಅವಯವವನ್ನು ತುರುಕಿಸುವುದೇ ಆಗಿದ್ದರೂ, ಲೈಂಗಿಕ ಅವಯವವನ್ನು ತುರುಕಿಸದೆ ಮಾಡುವ ಲೈಂಗಿಕ ಭಂಗಿಳು ಸಹ ಪ್ರಚಾರದಲ್ಲಿವೆ.
ಕಾರ್ಗಿಲ್ ಸಂಘರ್ಷ ವೆಂದೇ ಹೆಸರಾದ ಕಾರ್ಗಿಲ್ ಯುದ್ಧವು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷವಾಗಿದ್ದು, ಕಾಶ್ಮೀರದ ಕಾರ್ಗಿಲ್ ಜಿಲ್ಲೆ ಮತ್ತು ನಿಯಂತ್ರಣ ರೇಖೆ (LOC) ಇರುವ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ಸಂಭವಿಸಿತು. ಭಾರತದಲ್ಲಿ ಈ ಸಂಘರ್ಷವನ್ನು ಆಪರೇಷನ್ ವಿಜಯ್ ಎಂದೂ ಉಲ್ಲೇಖಿಸಲಾಗುತ್ತದೆ, ಇದು ಈ ಪ್ರದೇಶದಲ್ಲಿನ ಭಾರತೀಯ ಸೇನಾ ಕಾರ್ಯಾಚರಣೆಯ ಸಂಕೇತನಾಮವಾಗಿದೆ. ಭಾರತೀಯ ವಾಯುಪಡೆಯು ಭಾರತೀಯ ಸೇನೆಯೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಸೇನೆ ಮತ್ತು ಅರೆಸೇನಾ ಪಡೆಗಳನ್ನು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಖಾಲಿಯಾದ ಭಾರತೀಯ ಸ್ಥಾನಗಳಿಂದ ಹೊರಹಾಕಿತು, ಇದನ್ನು ಆಪರೇಷನ್ ಸಫೇದ್ ಸಾಗರ್ (ಬಿಳಿ ಸಾಗರ) ಎಂದು ಹೆಸರಿಸಲಾಯಿತು.
ಸ್ತನ್ಯಪಾನ (ನರ್ಸಿಂಗ್) ಎಂದರೆ ಅಮ್ಮಂದಿರು ಸ್ತನದಿಂದ ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ ಹಾಲನ್ನು ಉಣಿಸುವುದು. ಸಸ್ತನಿ ವರ್ಗದಲ್ಲಿ ಹಾಲು ತಯಾರಿ ಹಾಗೂ ಕುಡಿಸುವಿಕೆ ಅತ್ಯಂತ ವಿಶಿಷ್ಟವಾದುದು. ಸ್ತನ್ಯಪಾನವು ಮಗುವಿನ ಜೀವನದಲ್ಲಿ ಜನಿಸಿದ ಮೊದಲ ಗಂಟೆಯೊಳಗೆ ಪ್ರಾರಂಭವಾಗುತ್ತದೆ ಮತ್ತು ಹಲವುವೇಳೆ ಮಗುವು ಬಯಸಿದಷ್ಟು ಕಾಲ ಮುಂದುವರಿಯುತ್ತದೆ ಎಂದು ಆರೋಗ್ಯ ವೃತ್ತಿಪರರು ಶಿಫಾರಸು ಮಾಡುತ್ತಾರೆ.
ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು. ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕ_ಕ್ರಿಯೆ ಎನ್ನಲಾಗದು.
ಅಮ್ಮ ಎಂಬುದು ಕನ್ನಡದಲ್ಲಿ ತಾಯಿಗೆ ಪರ್ಯಾಯ ಪದ.ಅಮ್ಮ ಎಂಬುದು ತಾಯಿಯನ್ನು ಸಂಬೋಧಿಸುವ ಪದ ಕೂಡಾ ಹೌದು.ಅಲ್ಲದೆ ಹಿರಿಯ ಹೆಂಗಸರನ್ನು ಸಂಬೋಧಿಸುವಾಗ ಮರ್ಯಾದೆ ಸೂಚಕ ಪದವಾಗಿ ಕೂಡಾ ಬಳಕೆಯಾಗುತ್ತದೆ.ಮಾತೃಸ್ವರೂಪಿಣಿಯಾದ ದೇವತೆಗೆ ಅಮ್ಮ ಎಂದು ಕರೆಯುವ ವಾಡಿಕೆ ಇದೆ.ಮೈಮೇಲೆ ಏಳುವ ದಡಾರ ಮುಂತಾದ ಗುಳ್ಳೆಗಳಿಗೆ "ಅಮ್ಮ ಎದ್ದಿದೆ" ಎಂದು ಹೇಳುವ ರೂಢಿ ಇದೆ. ಅಮ್ಮ ಹೆಸರಿನ ಕನ್ನಡ ಚಲನಚಿತ್ರದ ಬಗ್ಗೆ ಲೇಖನ ಈ ಪುಟದಲ್ಲಿ ಇದೆ.
ಸಾಧನ ಶಬ್ದವು "ಏನನ್ನಾದರೂ ಸಾಧಿಸುವ ವಿಧಾನ" ಎಂದು ಅರ್ಥಕೊಡುವ ಸಾಮೂಹಿಕ ಪದವಾಗಿದೆ. ಈ ಪದವು ಯೋಗಿಕ ಸಂಪ್ರದಾಯದಿಂದ ಬಂದಿದೆ ಮತ್ತು ಈ ವಾಸ್ತವದಲ್ಲಿ ಅವನ/ಅವಳ ಜೀವನದ ಪರಮ ಅಭಿವ್ಯಕ್ತಿಯೆಡೆಗೆ ಸಾಧಕನನ್ನು ಮುನ್ನಡೆಸುವ ಗುರಿಹೊಂದಿರುವ ಯಾವುದೇ ಆಧ್ಯಾತ್ಮಿಕ ಅಭ್ಯಾಸವನ್ನು ಸೂಚಿಸುತ್ತದೆ. ಇದು ವಿವಿಧ ಆಧ್ಯಾತ್ಮಿಕ ಅಥವಾ ಆಚರಣಾ ಸಂಬಂಧಿ ಉದ್ದೇಶಗಳನ್ನು ಸಾಧಿಸಲು ಅನುಸರಿಸಲಾದ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಸಂಪ್ರದಾಯಗಳಲ್ಲಿನ ಅನೇಕ ವಿಭಾಗಗಳನ್ನು ಒಳಗೊಂಡಿದೆ.
ವಜ್ಜಿ ಅಥವಾ ವೃಜ್ಜಿ ಲಿಚ್ಛವಿಗಳನ್ನು ಒಳಗೊಂಡ ಒಂದು ಒಕ್ಕೂಟವಾಗಿತ್ತು ಮತ್ತು ಪ್ರಾಚೀನ ಭಾರತದ ಪ್ರಧಾನ ಮಹಾಜನಪದಗಳಲ್ಲಿ ಒಂದಾಗಿತ್ತು. ಇವರು ಆಳುತ್ತಿದ್ದ ಪ್ರದೇಶ ಉತ್ತರ ಬಿಹಾರದಲ್ಲಿನ ಮಿಥಿಲಾ ಪ್ರದೇಶವನ್ನು ರೂಪಿಸುತ್ತದೆ ಮತ್ತು ವೈಶಾಲಿ ಇವರ ರಾಜಧಾನಿಯಾಗಿತ್ತು. ಬೌದ್ಧ ಪಠ್ಯ ಅಂಗುತ್ತರ ನಿಕಾಯ ಮತ್ತು ಜೈನ ಪಠ್ಯ ಭಗವತಿ ಸೂತ್ರ ಎರಡೂ ವಜ್ಜಿಯನ್ನು ತಮ್ಮ ಹದಿನಾರು ಮಹಾಜನಪದಗಳ ಪಟ್ಟಿಗಳಲ್ಲಿ ಸೇರಿಸಿದ್ದವು.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗಿಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌದರಿ ಅವರ ಪ್ರಕಾರ ಇದನ್ನು 'ಮೂಲಭೂತ ಹಕ್ಕು'ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ |||(3)(ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ ಸಂವಿಧಾನದಲ್ಲಿ ೬(6) ಮೂಲಭೂತ ಹಕ್ಕುಗಳಿವೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಗೇಡು ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: If you get your hands dirty in the mud, you will get food.
ಪ್ರೇಮಲತಾ ಅಗರವಾಲ್ (ಜನನ ೧೯೬೩) ವಿಶ್ವದ ಏಳು ಅತಿ ಎತ್ತರದ ಭೂ ಖಂಡದ ಶಿಖರಗಳಾದ ಸೆವೆನ್ ಸಮ್ಮಿಟ್ಸ್ ಅನ್ನು ಅಳೆದ ಮೊದಲ ಭಾರತೀಯ ಮಹಿಳೆ. ೨೦೧೩ ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಮತ್ತು ೨೦೧೭ ರಲ್ಲಿ ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು ಪರ್ವತಾರೋಹಣ ಕ್ಷೇತ್ರದಲ್ಲಿನ ಆಕೆಯ ಸಾಧನೆಗಳಿಗಾಗಿ ನೀಡಲಾಯಿತು. ೧೭ ಮೇ ೨೦೧೧ ರಂದು, ಅವರು ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು (೨೯,೦೩೨) ಏರಿದ ಅತ್ಯಂತ ಹಿರಿಯ ಭಾರತೀಯ ಮಹಿಳೆಯಾದರು.
ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು.
ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್‌ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.
ಕ್ರಯೋಜೆನಿಕ್ ಎಲೆಕ್ಟ್ರಾನ್ ಟೊಮೊಗ್ರಫಿ
ಕ್ರಯೋಜೆನಿಕ್ ಇಟಾಕ್ಟಾನ್ ಟೊಮೊಗ್ರಫಿ (ಕ್ರಯೋಇಟಿ) ಹೆಚ್ಚಿನ ರೆಸಲ್ಯೂಶನ್ (~1–4 nm) ಮೂರು ಆಯಾಮದ ಮಾದರಿಗಳನ್ನು ಪುನರ್ನಿರ್ಮಿಸಲು ಬಳಸಲಾಗುತ್ತದೆ ಚಿತ್ರಣ ತಂತ್ರವಾಗಿದೆ, (ಆದರೆ ಇವುಗಳಿಗೆ ಸೀಮಿತವಾಗಿಲ್ಲ) ಜೈವಿಕ ಮ್ಯಾಕ್ರೋಮಾಲಿಕ್ಯೂಲ್‌ಗಳು ಮತ್ತು ಕೋಶಗಳು.[1][2] ಕ್ರಯೋಇಟಿ ಎಂಬುದು ಟ್ರಾನ್ಸ್‌ಮಿಷನ್ ಇಟಾಲಿಯನ್ ಕ್ರಯೋಮೈಕ್ರೋಸ್ಕೋಪಿ (ಕ್ರಯೋಟಿಐಎಂ) ಯ ವಿಶೇಷ ಅನ್ವಯಿಕೆ, ಇದರಲ್ಲಿನ ಮಾದರಿ ಓರೆಯಾಗಿಸಿ ಚಿತ್ರಿಸಲಾಗಿದೆ, ಇದರ ಪರಿಣಾಮವಾಗಿ ಮಾನವ ದೇಹದ CT ಸ್ಕ್ಯಾನ್‌ನಂತೆಯೇ ಪುನರ್ನಿರ್ಮಾಣವನ್ನು 3D 2D ಯನ್ನು ಬಳಸಬಹುದಾಗಿದೆ ಚಿತ್ರಗಳ ಸರಣಿ. ಇತರ ಇಟಾಲಿಯನ್ ಟೊಮೊಗ್ರಫಿ ತಂತ್ರಗಳಿಗೆ ವ್ಯತಿರಿಕ್ತವಾಗಿ, ಮಾದರಿಗಳನ್ನು ಕ್ರಯೋಜೆನಿಕ್ ಪರಿಸ್ಥಿತಿಗಳಲ್ಲಿ (< −150 °C) ಚಿತ್ರಿಸಲಾಗಿದೆ.
ಮಹಾಭಾರತ ಮತ್ತು ರಾಮಾಯಣ ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯವಾಗಿದ್ದು ಇವುಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುತ್ತಾರೆ. ಮಹಾಭಾರತ ಇದು ಕುರುಕ್ಷೇತ್ರ ಯುದ್ಧದ ಘಟನೆಗಳು ಮತ್ತು ನಂತರದ ಘಟನೆಗಳನ್ನು ವಿವರಿಸುತ್ತದೆ, ಇದು ರಾಜಮನೆತನದ ಸೋದರ ಸಂಬಂಧಿಗಳ ಎರಡು ಗುಂಪುಗಳಾದ ಕೌರವರು ಮತ್ತು ಪಾಂಡವರ ನಡುವಿನ ಉತ್ತರಾಧಿಕಾರದ ಯುದ್ಧವಾಗಿದೆ. ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು.
ದೃಗ್ವಿಜ್ಞಾನ ಎನ್ನುವುದು ಬೆಳಕಿನ ವರ್ತನೆ ಮತ್ತು ಲಕ್ಷಣಗಳನ್ನು, ವಸ್ತುವಿನ ಜೊತೆಗೆ ಅದರ ಸಂವಹನ ಮತ್ತು ಅದನ್ನು ಬಳಸುವ ಅಥವಾ ಶೋಧಿಸುವ ಉಪಕರಣಗಳ ರಚನೆಯನ್ನು ಅಧ್ಯಯಿಸುವ ಭೌತಶಾಸ್ತ್ರದ ಒಂದು ಶಾಖೆ. ದೃಗ್ವಿಜ್ಞಾನವು ಸಾಮಾನ್ಯವಾಗಿ ದೃಷ್ಟಿಗೋಚರವಾದ, ಅತಿನೇರಳೆ, ಮತ್ತು ಅತಿಗೆಂಪು ಬೆಳಕಿನ ಬಗೆಗೆ ವಿವರಿಸುತ್ತದೆ. ಬೆಳಕು ವಿದ್ಯುದಯಸ್ಕಾಂತ ತರಂಗ ಆಗಿರುವುದರಿಂದ, ವಿದ್ಯುದಯಸ್ಕಾಂತ ವಿಕಿರಣದ ಇತರ ರೂಪಗಳು ಉದಾಹರಣೆಗೆ ಕ್ಷ-ಕಿರಣಗಳು, ಸೂಕ್ಷ್ಮತರಂಗಗಳು, ಮತ್ತು ರೇಡಿಯೋ ತರಂಗಗಳು ಇದೇ ರೀತಿಯ ಲಕ್ಷಣಗಳನ್ನು ತೋರುತ್ತದೆ.
ಟಾಯ್ಲೆಟ್: ಏಕ್ ಪ್ರೇಮ್ ಕಥಾ (ಚಲನಚಿತ್ರ)
ಟಾಯ್ಲೆಟ್: ಏಕ್ ಪ್ರೇಮ್ ಕಥಾ ೨೦೧೭ರ ಒಂದು ಹಿಂದಿ ಹಾಸ್ಯಭರಿತ ನಾಟಕೀಯ ಚಲನಚಿತ್ರ. ಈ ಚಿತ್ರವನ್ನು ಶ್ರೀ ನಾರಾಯಣ್ ಸಿಂಗ್ ನಿರ್ದೇಶಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ನೀರಜ್ ಪಾಂಡೆ ಸಹನಿರ್ಮಾಪಕರಾಗಿರುವ ಈ ಚಿತ್ರದಲ್ಲಿ, ಮುಖ್ಯ ಪಾತ್ರಗಳಲ್ಲಿ ಅಕ್ಷಯ್ ಕುಮಾರ್ ಮತ್ತು ಭೂಮಿ ಪೇಡ್ನೇಕರ್ ನಟಿಸಿದ್ದಾರೆ.
"ಹಡಪದ ಅಪ್ಪಣ್ಣ" ನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಇವರು "ಹಡಪದ" ಸಮಾಜದವರಾಗಿದ್ದು ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ "ಅನುಭವ ಮಂಟಪದಲ್ಲಿ" ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನವರಿಗೆ ಕನ್ನಡಿಯಾಗಿದೆಯೆಂದರೆ ತಪ್ಪಾಗಲಾರದು.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ದಾಖಲೆಗಳ ವರ್ಗಾವಣೆಗೆ 1993ರಲ್ಲಿ ಅಡೋಬ್ ಸಿಸ್ಟಮ್ಸ್ ಅವರಿಂದ ಪೋರ್ಟೆಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (ಪಿಡಿಎಫ್ ) ಎಂಬ ಫೈಲ್ ಮಾದರಿ ನಿರ್ಮಾಣವಾಗಿದೆ. ಪ್ರತಿಯೊಂದು ಪಿಡಿಎಫ್ ಪೈಲ್ 2 ಆಯಾಮದ ಡಾಕ್ಯುಮೆಂಟ್‌ಗಳನ್ನು ನೋಡಲು ಬಳಸಲಾಗಿದ್ದು, ಅವು ಯಾವುದೇ ಅಪ್ಲಿಕೇಶನ್ ಸಾಫ್ಟ್‌ವೇರ್, ಹಾರ್ಡ್‌ವೇರ್ ಅಥವಾ ಆಪರೇಟಿಂಗ್ ಸಿಸ್ಟಮ್ ಆಗಿದ್ದರೂ ಕೂಡಾ ನೋಡಲು ಸಾಧ್ಯವಾಗುವಂತೆ ರೂಪಿಸಲಾಗಿದೆ. ಪ್ರತಿಯೊಂದು ಪಿಡಿಎಫ್ ಫೈಲ್, ನಿರ್ದಿಷ್ಟಪಡಿಸಿದ 2ಡಿ ಡಾಕ್ಯುಮೆಂಟ್ ಪುಟ ವಿನ್ಯಾಸವನ್ನು ಹೊಂದಿದ್ದು ಅದು ಪಠ್ಯ, ಅಕ್ಷರ ವಿನ್ಯಾಸ, ಚಿತ್ರಗಳು ಮತ್ತು ದಾಖಲೆಯನ್ನು ರಚಿಸುವ 2ಡಿ ವೆಕ್ಟರ್ ಗ್ರಾಫಿಕ್ಸ್ ಡಾಕ್ಯುಮೆಂಟ್‌ನ ಸಂಪೂರ್ಣ ವಿವರಣೆಯನ್ನು ಒಳಗೊಂಡಿರುತ್ತದೆ.
ರುದ್ರಪ್ಪ ಮಾನಪ್ಪ ಲಮಾಣಿ (ಜನನ ೧ ಜೂನ್ ೧೯೫೯) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಇವರು ಪ್ರಸ್ತುತ ಜುಲೈ ೨೦೨೩ ರಿಂದ ಕರ್ನಾಟಕ ವಿಧಾನಸಭೆಯ ೨೫ನೇ ಉಪ ಸಭಾಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹಾವೇರಿ ಜಿಲ್ಲೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಾಗಿರುವ ಹಾವೇರಿ ವಿಧಾನಸಭಾ ಕ್ಷೇತ್ರ ಶಾಸಕರಾಗಿದ್ದಾರೆ. ಇವರು ೨೦೨೩ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಪ್ರತಿನಿಧಿಸಿ ಗೆದ್ದರು.
ಕಡಲುಕೋಳಿ ಗಳು, ಡಿಯೊಮೆಡೈಡೆ ಜೀವಶಾಸ್ತ್ರೀಯ ಕುಟುಂಬಕ್ಕೆ ಸೇರಿವೆ. ದೊಡ್ಡ, ಕಡಲುಹಕ್ಕಿಗಳಾದ ಇವು ಪ್ರೊಸೆಲ್ಲರಿಫಾರ್ಮ್‌ಸ್(ಟ್ಯೂಬ್‌ನೋಸ್‌ಸ್)ಗಳ ಶ್ರೇಣಿಯಲ್ಲಿರುವ ಪ್ರೊಸೆಲ್ಲರಿಡ್ಸ್, ಸ್ಟಾರ್ಮ್-ಪೆಟ್ರಲ್(ಬಿರುಗಾಳಿ ಹಕ್ಕಿ) ಗಳು ಮತ್ತು ಡೈವಿಂಗ್-ಪೆಟ್ರಲ್ ಗಳ ಗುಂಪಿಗೆ ಸೇರಿವೆ. ಅವು ದಕ್ಷಿಣ ಸಮುದ್ರ ಮತ್ತು ಉತ್ತರ ಪೆಸಿಫಿಕ್ ದಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ.
ವಂದೇ ಮಾತರಂ ಪಶ್ಚಿಮ ಬಂಗಾಳದ ಪ್ರಮುಖ ಲೇಖಕ ಮತ್ತು ಕವಿ ಬಂಕಿಮಚಂದ್ರ ಚಟರ್ಜಿ ರಚಿಸಿದ, ಹಾಡು. ಆದರೆ ಕನ್ನಡದ ಪ್ರಮುಖ ಕಥೆಗಾರ ಶಂಕರ ಬೈಚಬಾಳ ಅವರ ವಂದೇ ಮಾತರಂ-ಸಲೀಂ- ಕೃತಿ ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕದನ ಕೃತಿಯಾಗಿದೆ. ಚಟ್ಟೊ ಉಪಾದ್ಯಾಯರ ಹಾಡು ರಾಷ್ಟ್ರಗೀತೆಯಾಗುವ ಎಲ್ಲ ಅಂಶ, ಅರ್ಹತೆಗಳಿದ್ದರೂ, ರವೀಂದ್ರನಾಥ ಟಾಗೋರ್ ರ ಜನಗಣ ಮನ ಕೃತಿಗೆ ಆ ಪಟ್ಟ ದೊರಕಿತು.
ಸ್ಥಳದೇಶಕಝಾಕಿಸ್ತಾನ್ ಮತ್ತು ಚೀನಾಭೌತಿಕ ಲಕ್ಷಣಗಳುಉಗಮ • ಸ್ಥಳಟೆಕೆಸ್ ಮತ್ತು ಕೋನೆಸ್ ನದಿಗಳು • ಎತ್ತರಟಿಯಾನ್ ಶಾನ್ ಮುಖಭಾಗ ಬಾಲ್ಖಾಶ್ ಸರೋವರಉದ್ದ೧,೪೩೯ ಕಿಮೀ (೮೯೪ ಮೈಲಿ)೧೪೦,೦೦೦ ಕಿಮೀ೨ (೫೪,೦೦೦ ಚದರ ಮೈಲಿ) ಇಲಿ ( Uighur ' ಇಲಿ ದರ್ಯಸಿ ' ; Kazakh: Ile , ئله ; Russian: Или ; Chinese , Dungan , Xiao'erjing : اِلِ حْ; Mongolian , ಅಕ್ಷರಶಃ "ಬೇರ್ನೆಸ್"), ಇದು ವಾಯುವ್ಯ ಚೀನಾ ಮತ್ತು ಆಗ್ನೇಯ ಕಝಾಕಿಸ್ತಾನ್‌ನಲ್ಲಿರುವ ನದಿಯಾಗಿದೆ. ಇದು ಕ್ಸಿನ್‌ಜಿಯಾಂಗ್ ಉಯಿಘರ್ ಸ್ವಾಯತ್ತ ಪ್ರದೇಶದ ಇಲಿ ಕಝಕ್ ಸ್ವಾಯತ್ತ ಪ್ರಾಂತ್ಯದಿಂದ ಕಝಾಕಿಸ್ತಾನ್‌ನ ಅಲ್ಮಾಟಿ ಪ್ರದೇಶಕ್ಕೆ ಹರಿಯುತ್ತದೆ. ಇದು ೧,೪೩೯ ಕಿಲೋಮೀಟರ್ (೮೯೪ ಮೈ) ಉದ್ದ (ಅದರ ಮೂಲ ನದಿ ಟೆಕ್ಸ್ ಸೇರಿದಂತೆ), ೮೧೫ ಕಿಲೋಮೀಟರ್ (೫೦೬ ಮೈ) ಉದ್ದ ಕಝಾಕಿಸ್ತಾನ್‌ದಲ್ಲಿ ವಿಸ್ತಾರವಾಗಿದೆ.
ಮರ್ದಾನಿ 2 ಎಂಬುದು 2019ರ ಭಾರತೀಯ ಹಿಂದಿ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಗೋಪಿ ಪುತ್ರನ್ ಬರೆದು ನಿರ್ದೇಶಿಸಿದ್ದಾರೆ. ಇದು 2014ರ ಮರ್ದಾನಿಯ ನಂತರದ ಭಾಗವಾಗಿದೆ. ಯಶ್ ರಾಜ್ ಫಿಲ್ಮ್ಸ್ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಿರುವ ಈ ಚಿತ್ರದಲ್ಲಿ ರಾಣಿ ಮುಖರ್ಜಿ ಹಿಂದಿನ ಚಿತ್ರದ ಪೊಲೀಸ್ ಅಧಿಕಾರಿ ಶಿವಾನಿ ಶಿವಾಜಿ ರಾಯ್ ಪಾತ್ರವನ್ನು ಪುನರಾವರ್ತಿಸಿದ್ದಾರೆ.
ಕೃತಕ ಬುದ್ಧಿಮತ್ತೆ ಅಥವಾ ಯಾಂತ್ರಿಕ ಬುದ್ಧಿಮತ್ತೆ (artificial intelligence) ಗಣಕ ವಿಜ್ಞಾನದ ಒಂದು ವಿಭಾಗ. ಪ್ರಮುಖ AI ಪಠ್ಯಪುಸ್ತಕಗಳು ಈ ಕ್ಷೇತ್ರವನ್ನು "ಬುದ್ಧಿಮತ್ತೆಯುಳ್ಳ ಯಂತ್ರಗಳ ವಿನ್ಯಾಸ ಮತ್ತು ಅಧ್ಯಯನ" ಎಂದು ಹೇಳುತ್ತವೆ. ಇದರಲ್ಲಿ ಒಂದು ಯಂತ್ರವು ತನ್ನ ಪರಿಸರವನ್ನು ಗ್ರಹಿಸಿ ತನಗೆ ಕೊಟ್ಟಿರುವ ಗುರಿಯತ್ತ ಹೆಚ್ಚು ಯಶಸ್ಸು ಪಡೆಯಲು ಅಗತ್ಯವಿರುವ ಕ್ರಮಗಳನ್ನು ತಾವೇ ಕೈಗೊಳ್ಳುತ್ತದೆ.
ಲಕ್ನೋ, ಭಾರತದ ಉತ್ತರ ಪ್ರದೇಶ ರಾಜ್ಯದ ರಾಜಧಾನಿ, ಭಾರತದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಒ೦ದಾಗಿದೆ, ಲಕ್ನೋ ನಾಮಸೂಚಕ ರಾಜ್ಯದ ಆಡಳಿತ ಕೇಂದ್ರದ ಮುಖ್ಯ ಕಛೇರಿಯಾಗಿದೆ ಮತ್ತು ನಾಮಸೂಚಕ ಜಿಲ್ಲಾ ಮತ್ತು ವಿಭಾಗವಾಗಿದೆ. ಭಾರತದ ೮ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಮತ್ತು ಉತ್ತರ ಪ್ರದೇಶದ ದೊಡ್ಡ ನಗರವಾಗಿದೆ. ಲಕ್ನೋ ಯಾವಾಗಲೂ ೧೮ ಮತ್ತು ೧೯ ನೇ ಶತಮಾನಗಳಲ್ಲಿ ನವಾಬ್ ಅಧಿಕಾರದ ಸ್ಥಾನವಾಗಿ ಉತ್ತರ ಭಾರತದ ಸಾಂಸ್ಕೃತಿಕ ಮತ್ತು ಕಲಾತ್ಮಕ ಹಬ್ ಆಗಿ ಮತ್ತು ಬಹುಸಂಸ್ಕೃತಿಯ ನಗರವಾಗಿದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ವಿಜಯನಗರ ಸಾಮ್ರಾಜ್ಯ:(ಕ್ರಿ.ಶ.೧೩೩೬ - ೧೬೪೬) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (ಕ್ರಿ.ಶ ೧೨೯೦ - ೧೩೨೦) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ದಖ್ನಿ ಅಥವಾ ದಖಿನಿ ಅಥವಾ ದಕ್ಖನಿ ಜನರು ದಖಿನಿ ಮಾತನಾಡುವ ಜನಾಂಗೀಯ ಸಮುದಾಯ, ಅವರು ಮಧ್ಯ ಮತ್ತು ದಕ್ಷಿಣ ಭಾರತದ ದಖಿನ್ ಪ್ರದೇಶದಲ್ಲಿ ವಾಸಿಸುತ್ತಾರೆ ಅಥವಾ ದಖಿನಿ ಭಾಷೆಯನ್ನು ಮಾತನಾಡುತ್ತಾರೆ. 1327 ರಲ್ಲಿ ಮುಹಮ್ಮದ್ ಬಿನ್ ತುಘಲಕ್ ಆಳ್ವಿಕೆಯಲ್ಲಿ ದೆಹಲಿ ಸುಲ್ತಾನತ್ತಿನ ರಾಜಧಾನಿ ದೆಹಲಿಯಿಂದ ದೌಲತಾಬಾದಿಗೆ ಸ್ಥಳಾಂತರಗೊಂಡಾಗ ಸಮುದಾಯವು ತನ್ನ ಮೂಲವನ್ನು ಗುರುತಿಸುತ್ತದೆ. ಮಧ್ಯ ಏಷ್ಯೆ, ಇರಾಕ಼್ ಮತ್ತು ಇರಾನಿನಿಂದ ಬಂದು ಬಹಮನಿ ಸುಲ್ತಾನರತ್ತಿನ (1347) ಅವಧಿಯಲ್ಲಿ ದಕ್ಖಿನ್ ಪ್ರದೇಶದಲ್ಲಿ ನೆಲೆಸಿದ್ದ ಆಫಾಕಿಯರೆಂದು ಕರೆಯಲ್ಪಡುವ ವಲಸಿಗ ಮುಸಲ್ಮಾನರಿಂದಲೂ ಹೆಚ್ಚಿನ ಸಂತತಿಯನ್ನು ಕಂಡುಹಿಡಿಯಬಹುದು.
ಜೈ ಅಮಿತ್‌ಭಾಯ್ ಶಾ (ಜನನ 22 ಸೆಪ್ಟೆಂಬರ್ 1988) ಒಬ್ಬ ಭಾರತೀಯ ಕ್ರಿಕೆಟ್ ಆಡಳಿತಾಧಿಕಾರಿ ಮತ್ತು ಉದ್ಯಮಿ, ಮತ್ತು ಡಿಸೆಂಬರ್ 2024 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ( ಐಸಿಸಿ ) ಅಧ್ಯಕ್ಷರಾಗಿದ್ದಾರೆ. ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದರು, ಜಾಗತಿಕ ಕ್ರಿಕೆಟ್ ಆಡಳಿತದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಅವರು ಭಾರತದ ಗೃಹ ಸಚಿವ ಅಮಿತ್ ಶಾ ಅವರ ಮಗ.